ಕನ್ನಡಿಗರ ಸ್ವಾಭಿಮಾನದ ದ್ಯೋತಕವಾಗಿರುವ ಮತ್ತು ಹಕ್ಕು ಬಾಧ್ಯತೆಗಳಿಗೆ ವೇದಿಕೆಯಾಗುವ ಹೊಸ ರಾಜಕೀಯ ಪಕ್ಷವೊಂದನ್ನು ಕಟ್ಟಲು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಬಂಡಾಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲರು ನಿರ್ಧರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ಉಂಟು ಮಾಡಿರುವ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತಳೆದಿರುವುದಾಗಿ ತಿಳಿಸಿದ್ದಾರೆ.
ವಿವಿಧ ವೇದಿಕೆ ಹಾಗೂ ಸಂಘಟನೆಗಳಲ್ಲಿರುವ ಕಾರ್ಯಕರ್ತರು ಮತ್ತು ಹೋರಾಟಗಾರರನ್ನು ಈ ನೂತನ ಪಕ್ಷದಲ್ಲಿ ಸೇರಿಸಿಕೊಂಡು ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವ ನೆಲೆಗಟ್ಟಿನಲ್ಲಿ ಪಕ್ಷ ಕಾರ್ಯನಿರ್ವಹಿಸಲಿದೆಯಲ್ಲದೆ, ಸ್ಥಳೀಯರ ಭಾವನೆಗಳು ಮತ್ತು ಆದ್ಯತೆಗಳಿಗೆ ಮನ್ನಣೆ ನೀಡಲಿದೆ ಎಂದು ಚಂಪಾ ತಿಳಿಸಿದ್ದಾರೆ.
|