ಶಂಕಿತ ಉಗ್ರರಾದ ಅಸಾದುಲ್ಲಾ ಮತ್ತು ಮಹಮದ್ ಗೌಸ್‍ರಿಂದ ಭಯೋತೇಪಾದಕ ಜಾಲದ ಕುರಿತು ಇನ್ನೂ ಹೆಚ್ಚಿನ ವಿವರ ಪಡೆಯಲು ಉದ್ದೇಶಿಸಿರುವ ಸಿಓಡಿ ಪೊಲೀಸ್ ಕಸ್ಟಡಿಯನ್ನು ಫೆ. 10 ರಿಂದ 16 ಕ್ಕೆ ವಿಸ್ತರಿಸಲಾಗಿದೆ.
ಅಸಾದುಲ್ಲಾ ಹಾಗೂ ಮಹಮದ್ ಗೌಸ್ ರನ್ನು ಶುಕ್ರವಾರ ಮಂಪರು ಪರೀಕ್ಷೆಗೆ ಒಳಪಡಿಸಿದ್ದರೂ, ಹೆಚ್ಚಿನ ಮಾಹಿತಿ ಲಭ್ಯವಾಗದಿದ್ದುದರಿಂದ ಮತ್ತೆ ಮಂಪರು ಪರೀಕ್ಷೆ ಒಳಪಡಿಸಲು ಸಿಓಡಿ ಪೋಲಿಸರು ನಿರ್ಧರಿಸಿದ್ದಾರೆ.
ಈ ಮಧ್ಯೆ ಕಿಮ್ಸ್ ವಿದ್ಯಾರ್ಥಿ ಆಸಿಪ್‌ಗೆ ಜಾಮೀನು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಹೊನ್ನಾಳಿ ನ್ಯಾಯಾಲಯವು ವಜಾಗೊಳಿಸಿದೆ. ಅಲ್ಲದೆ, ಮತ್ತಿಬ್ಬರು ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ನಡುವೆ ಇಬ್ಬರು ಉಗ್ರರನ್ನು ಹೊನ್ನಾಳಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ವಿಚಾರಣೆ ಬಳಿಕ ಮತ್ತೆ ಬೆಂಗಳೂರಿಗೆ ಕರೆತರಲಾಗುವುದು ಎಂದು ಸಿಓಡಿ ಮೂಲಗಳು ತಿಳಿಸಿವೆ.
|