ಭಾನುವಾರ ಆಸ್ಟ್ರೇಲಿಯಾ ಭಾರತ ನಡುವೆ ಆಸ್ಟೇಲಿಯಾದಲ್ಲಿ ಕಾಮನ್ ವೆಲ್ತ್ ಬ್ಯಾಂಕ್ ತ್ರಿಕೋನ ಸರಣಿ ನಡೆಯುದ್ದರೆ, ಇತ್ತ ಬೆಂಗಳೂರಿನಲ್ಲಿ ಕ್ರಿಕೆಟ್ ಬೆಕ್ಕಿಂಗ್ ನಡೆಸುತ್ತಿದ್ದ ಕೇಂದ್ರದ ದಾಳಿ ಮಾಡಿದಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ರಾಜಾಜಿನಗರದ ಮನೆಯೊಂದರಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದ ಸುಳಿವಿನ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಸುಮಾರು 31 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳಾದ ರಮೇಶ್ ಹಾಗೂ ದೀಪಕ್‌ರನ್ನು ಬಂಧಿಸಿದ್ದಾರೆ.
ಎಸಿಬಿ ಜಿ.ಬಿ.ಕೌರಿ ಅವರ ನೇತೃತ್ವದಲ್ಲಿ ಇನ್‌ಸ್ಸೆಕ್ಟರ್ ಆರ್. ರಾಮಚಂದ್ರನ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದು, ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಬಳಕೆ ಮಾಡಿದ್ದ ಸುಮಾರು 13ಸಾವಿರ ನಗದು, 4 ಮೊಬೈಲ್, ಹಾಗೂ 1 ಲ್ಯಾಂಡ್‍ಫೋನ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಬಟ್ಟೆ ವ್ಯಾಪಾರಿಗಳಾಗಿದ್ದು, ಚೆನೈ ಮೂಲದ ಬುಕ್ಕಿ ಜತೆ ಕ್ರಿಕೆಟ್ ಬೆಟ್ಟಿಂಗ್ ವಹಿವಾಟು ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
|