ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೇ ನೇಮಕ- ಕನ್ನಡಿಗರಿಗೆ ಅನ್ಯಾಯ ಆಗಿಲ್ಲ: ಲಾಲೂ
ರೈಲ್ವೆ ಇಲಾಖೆ ಹುದ್ದೆಗಳಲ್ಲಿ ಯಾವ ರಾಜ್ಯಕ್ಕೂ ಪ್ರತ್ಯೇಕ ಪ್ರಾತಿನಿಧ್ಯ ನೀಡುತ್ತಿಲ್ಲ, ನೇಮಕಾತಿಯಲ್ಲಿ ಕನ್ನಡಿಗರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರೈಲ್ವೇ ಪರೀಕ್ಷೆಯಲ್ಲಿ ಬಿಹಾರದ ವಿದ್ಯಾರ್ಥಿಗಳೇ ಹೆಚ್ಚಾಗಿ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ರೈಲ್ವೆ ಇಲಾಖೆ ನಡೆಸಿರುವ ನೇಮಕಾತಿ ಸಮರ್ಥಿಸಿಕೊಂಡರು.

ರಾಜ್ಯ ಪ್ರವಾಸದಲ್ಲಿರುವ ಲಾಲೂ ಪ್ರಸಾದ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ರೈಲ್ವೆ ಇಲಾಖೆಯಲ್ಲಿ ಯಾವ ರಾಜ್ಯಕ್ಕೂ ಪ್ರಾತಿನಿಧ್ಯ ನೀಡಿಲ್ಲ. ಅರ್ಹತೆ ಆಧಾರದಲ್ಲಿ ನೇಮಕಾತಿ ನಡೆಸಲಾಗುತ್ತಿದೆ. ಅಲ್ಲದೆ, ರೈಲ್ವೆ ಇಲಾಖೆ ನಡೆಸಿರುವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗಷ್ಟೆ ಇಲಾಖೆಯಲ್ಲಿ ಅರ್ಹತೆ ಎಂದು ಸ್ಪಷ್ಟೀಕರಣ ನೀಡಿದರು.

ಈ ಬಾರಿ ಜನಸಾಮಾನ್ಯ ಬಜೆಟ್ ಮಂಡಿಸಲಿದ್ದು, 4 ಸಾವಿರ ಹೊಸ ರೈಲಿಗೆ ಚಾಲನೆ ನೀಡಲಾಗುವುದು. ಅಲ್ಲದೆ, ಜನಸಾಮಾನ್ಯರಿಗೆ ಪೂರಕವಾಗುವ ಹಲವು ಯೋಜನೆಗಳನ್ನು ಬಜೆಟ್ನಲ್ಲಿ ಮಂಡಿಸಲಾಗುವುದು ಎಂದು ರೈಲ್ವೆ ಬಜೆಟ್ ಬಗ್ಗೆ ಕೆಲವು ಮಾಹಿತಿಯನ್ನು ಲಾಲೂ ನೀಡಿದರು.

ಈ ಮಧ್ಯೆ, ತುಮಕೂರಿನ ರೈಲ್ವೆ ನಿಲ್ದಾಣಕ್ಕೆ ಲಾಲೂ ಆಗಮಿಸಿದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿ, ಲಾಲೂ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ಬಿಗಿ ಬಂದೋಬಸ್ತ್ ಮೂಲಕ ಲಾಲೂ ಪ್ರಸಾದ್ ಅವರನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಲಾಯಿತು.
ಮತ್ತಷ್ಟು
ಲಷ್ಕರ್ ಉಗ್ರನ ಸೆರೆ: ಕರ್ನಾಟಕ ಪೊಲೀಸರು ಉ.ಪ್ರ.ಕ್ಕೆ
ಕ್ರಿಕೆಟ್ ಬೆಟ್ಟಿಂಗ್ : ಇಬ್ಬರ ಬಂಧನ
ರಾಜ್ಯಪಾಲರು ಕಾಂಗ್ರೆಸ್ ಕೈಗೊಂಬೆ:ಖರ್ಗೆ ನಿರಾಕರಣೆ
ಶಂಕಿತ ಉಗ್ರರ ಕಸ್ಟಡಿ ವಿಸ್ತರಣೆ
ಬಿಜೆಪಿಯಲ್ಲೂ ಜಗಳ: ದೇವೇಗೌಡ ಭವಿಷ್ಯ ನುಡಿ
ರಾಜಕಾರಣಿಗಳಿಗೆ ಸ್ವಹಿತವೇ ಮುಖ್ಯ: ವೆಂಕಟಾಚಲ ವಿಷಾದ