ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಐಎಸ್ಸಿ ದಾಳಿ: ಸೂತ್ರದಾರಿ ಬಿಲಾಲ್ ಅಲ್ಲ, ಹಂಜಾ
ಮೊಬೈಲ್ ವಶ, ಅಸಾದುಲ್ಲಾನಿಗೆ ಮತ್ತೆ ಮಂಪರು ಪರೀಕ್ಷೆ
ಬೆಂಗಳೂರಿನ ಐಐಎಸ್ಸಿ ದಾಳಿಯ ಪ್ರಮುಖ ರೂವಾರಿ ಅಬು ಹಂಜಾ ಎಂಬ ಸ್ಪೋಟಕ ಮಾಹಿತಿ ಉಗ್ರರ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಈತ ಪ್ರಸ್ತುತ ಪಾಕಿಸ್ತಾನದಲ್ಲಿ ನೆಲಸಿದ್ದಾನೆ.

ಐಐಎಸ್ಸಿ ದಾಳಿಯಲ್ಲಿ ಪಾಕ್ ಮೂಲದ ಶಹೀದ್ ಬಿಲಾಲ್ ಎಂಬವನು ಮೂಲ ಸೂತ್ರದಾರಿ ಎಂದು ಈವರೆಗೆ ನಂಬಲಾಗಿತ್ತು. ಆದರೆ ಮಹಮದ್ ಗೌಸ್ ವಿಚಾರಣೆ ವೇಳೆ ಈ ಮಾಹಿತಿ ಸ್ಫೋಟಗೊಂಡಿದೆ.

ಈ ಎಲ್ಲಾ ಉಗ್ರರಿಗೆ ಬೆಂಗಳೂರು ನಗರವೇ ಪ್ರಮುಖ ನೆಲೆಯಾಗಿದ್ದು, ಇಲ್ಲಿಯೇ ದಾಳಿಯ ಬಗ್ಗೆ ಸಂಚು ರೂಪಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಮಧ್ಯೆ, ಕಿಮ್ಸ್ ವಿದ್ಯಾರ್ಥಿ ಆಸಿಫ್‌ಗೆ ಜಾಮೀನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಹುಬ್ಬಳ್ಳಿ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಆಸಿಫ್‌ಗೆ ಜಾಮೀನು ನೀಡಬಾರದು ಎಂದು ಹುಬ್ಬಳ್ಳಿ ವಕೀಲರ ಸಂಘ ಆಗ್ರಹಿಸಿದೆ.

ಕಳೆದ ಕೆಲವು ದಿನಗಳಿಂದ ಬಂಧಿತ ಉಗ್ರರ ಮೊಬೈಲ್‌ಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಹೊನ್ನಾಳಿ ಸಮೀಪ ಮೊಬೈಲ್ ದೊರೆತಿದ್ದು, ಈ ಮೂಲಕ ಮಹತ್ವದ ಮಾಹಿತಿಗಳು ಹೊರಬೀಳುವ ಸಾಧ್ಯತೆಗಳಿವೆ. ಅಲ್ಲದೆ, ಕಿಮ್ಸ್ ಕಾಲೇಜಿನ ಆರು ವಿದ್ಯಾರ್ಥಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಈ ನಡುವೆ, ಬಂಧಿತ ಉಗ್ರಗಾಮಿ ಅಸಾದುಲ್ಲಾ, ಮಂಪರು ಪರೀಕ್ಷೆಗೆ ಸೂಕ್ತವಾಗಿ ಸ್ಪಂದಿಸದ ಕಾರಣ ಸೋಮವಾರ ಮತ್ತೆ ಬೆಂಗಳೂರಿಗೆ ಕರೆತಂದು ಮಂಪರು ಪರೀಕ್ಷೆಗೆ ಒಳಪಡಿಸಲು ಸಿಓಡಿ ನಿರ್ಧರಿಸಿದೆ.
ಮತ್ತಷ್ಟು
'ಪ್ರೀತಿ ತುಂಬಿದ ಜೀವಸೆಲೆ' ಅರ್ತಿಕಜೆಗೆ ಆತ್ಮೀಯ ಸನ್ಮಾನ
ರೈಲ್ವೇ ನೇಮಕ- ಕನ್ನಡಿಗರಿಗೆ ಅನ್ಯಾಯ ಆಗಿಲ್ಲ: ಲಾಲೂ
ಲಷ್ಕರ್ ಉಗ್ರನ ಸೆರೆ: ಕರ್ನಾಟಕ ಪೊಲೀಸರು ಉ.ಪ್ರ.ಕ್ಕೆ
ಕ್ರಿಕೆಟ್ ಬೆಟ್ಟಿಂಗ್ : ಇಬ್ಬರ ಬಂಧನ
ರಾಜ್ಯಪಾಲರು ಕಾಂಗ್ರೆಸ್ ಕೈಗೊಂಬೆ:ಖರ್ಗೆ ನಿರಾಕರಣೆ
ಶಂಕಿತ ಉಗ್ರರ ಕಸ್ಟಡಿ ವಿಸ್ತರಣೆ