ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಗರಸಭೆ ಚುನಾವಣೆಯಲ್ಲಿ ಘರ್ಷಣೆ, ಲಾಠಿ ಪ್ರಹಾರ
ನಗರಸಭೆ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ಸೋಮವಾರ ನಡೆದ ಘರ್ಷಣೆ ಪರಿಣಾಮ ಸಿಂಧನೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ವೇಳೆ ನಾಮಪತ್ರ ಹರಿದು ಹಾಕಿದ್ದರಿಂದ ಈ ಘರ್ಷಣೆ ಸಂಭವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಈ ಘರ್ಷಣೆಗೆ ಸಂಬಂಧಪಟ್ಟಂತೆ ಪೊಲೀಸರು 14 ಜನರನ್ನು ಬಂಧಿಸಿದ್ದಾರೆ.

ನಗರಸಭೆಯ ಚುನಾವಣೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಯಿತು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬುದು ಕಾಂಗ್ರೆಸ್ ಪಕ್ಷದ ಅಸಮಾಧಾನಕ್ಕೆ ಕಾರಣವಾಯಿತು. ಇದರಿಂದ ನಗರಸಭೆಯ ಹೊರಗಡೆ ಜಮಾಯಿಸಿದ್ದ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತು.

ಈ ಸಂಬಂಧ ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದು, ಕಚೇರಿಯ ಮೇಲೆ ಕಲ್ಲುತೂರಾಟ ಪ್ರಾರಂಭವಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಕಾಂಗ್ರೆಸ್ ಪಕ್ಷವು ಕಾರ್ಯಕರ್ತರ ಬಂಧನ ಖಂಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಮತ್ತಷ್ಟು
ಮಂಚನಬೆಲೆ ಡ್ಯಾಂನಲ್ಲಿ ಇಬ್ಬರು ಜಲಸಮಾಧಿ
ಐಐಎಸ್ಸಿ ದಾಳಿ: ಸೂತ್ರದಾರಿ ಬಿಲಾಲ್ ಅಲ್ಲ, ಹಂಜಾ
'ಪ್ರೀತಿ ತುಂಬಿದ ಜೀವಸೆಲೆ' ಅರ್ತಿಕಜೆಗೆ ಆತ್ಮೀಯ ಸನ್ಮಾನ
ರೈಲ್ವೇ ನೇಮಕ- ಕನ್ನಡಿಗರಿಗೆ ಅನ್ಯಾಯ ಆಗಿಲ್ಲ: ಲಾಲೂ
ಲಷ್ಕರ್ ಉಗ್ರನ ಸೆರೆ: ಕರ್ನಾಟಕ ಪೊಲೀಸರು ಉ.ಪ್ರ.ಕ್ಕೆ
ಕ್ರಿಕೆಟ್ ಬೆಟ್ಟಿಂಗ್ : ಇಬ್ಬರ ಬಂಧನ