ತನ್ನ ಇತಿಹಾಸ-ಪರಂಪರೆಗಳಿಂದಾಗಿ ವಿಶ್ವದೆಲ್ಲೆಡೆಯ ಗಮನ ಸೆಳೆದಿರುವ ಹಂಪಿಯೀಗ ಉಗ್ರಗಾಮಿಗಳ ನೆಲೆಬೀಡಾಗುತ್ತಿದೆ ಎಂದು ಖ್ಯಾತ ಸಂಶೋಧಕ ಡಾ| ಎಂ.ಚಿದಾನಂದ ಮೂರ್ತಿ ವಿಷಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕಳೆದ 3 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಹಿಂದೂಗಳ ದೇವಾಲಯಗಳನ್ನು ದರ್ಗಾಗಳನ್ನಾಗಿ ಮಾರ್ಪಡಿಸಲಾಗಿದೆ. ಇಲ್ಲಿ ನಮಾಜ್ ನಡೆಯುತ್ತಿದ್ದರೂ ಪೊಲೀಸರು, ಹಿಂದೂಗಳು ಮೂಕಪ್ರೇಕ್ಷಕರಾಗಿರಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ನಮ್ಮ ಜನ ಇನ್ನೂ ಎಚ್ಚೆತ್ತುಕೊಳ್ಳುವುದು ಯಾವಾಗ? ಎಂದು ತಮ್ಮ ಸಾತ್ವಿಕ ಆಕ್ರೋಶವನ್ನು ವ್ಯಕ್ತಪಡಿಸಿದರು.
ಮಹಾನವಮಿ ದಿಬ್ಬದ ಮೇಲೆ ಮುಸ್ಲಿಂ ಯುವಕನೊಬ್ಬ ನಮಾಜ್ ಮಾಡುತ್ತಿದ್ದುದನ್ನು ಕಾವಲುಗಾರರು ತಡೆದಾಗ ಬೈಗುಳವನ್ನು ಅವರು ಎದುರಿಸಬೇಕಾಗಿ ಬಂತು. ಇಷ್ಟಾಗಿಯೂ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಮೂರ್ತಿ ಆಪಾದಿಸಿದರು.
ರಾಷ್ಟ್ರಪತಿಗಳು ಇತ್ತೀಚೆಗೆ ಹಂಪಿಗೆ ಬಂದಿದ್ದಾಗ, ಯಾರಿಗೂ ತೊಂದರೆ ನೀಡದ ಕೋತಿಗಳನ್ನು ಹಿಡಿದು ಪಂಜರಗಳಲ್ಲಿ ಕೂಡಿಹಾಕಲಾಯ್ತು. ಅದರ ಬದಲು ಇಂಥ ಉಗ್ರಗಾಮಿಗಳನ್ನಾದರೂ ಹಿಡಿಯಬಹುದಿತ್ತು ಎಂಬ ಮಾತನ್ನು ಮೂರ್ತಿಯವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
|