ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೇಗ ಬೇಗ ಚುನಾವಣೆ ನಡೆಸಿ: ಕುಮಾರಸ್ವಾಮಿ ಒತ್ತಾಯ
ಚುನಾವಣೆ ಮುಂದೂಡುವ ಕಾಂಗ್ರೆಸ್ ಹುನ್ನಾರವನ್ನು ತಡೆದು ರಾಜ್ಯದಲ್ಲಿ ಶೀಘ್ರವೇ ಚುನಾವಣೆ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣೆ ಮುಂದೂಡುವ ಅಧಿಕಾರ ತಮ್ಮ ಕೈಯಲಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡು ಬಂದಿದ್ದರೂ, ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿರುತ್ತೋ ಅವು ರಾಜಭವನವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಕಾಂಗ್ರೆಸ್ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು.

ಕ್ಷೇತ್ರ ಪುನರ್ ವಿಂಗಡಣೆಯ ಆಧಾರದಲ್ಲಿ ಚುನಾವಣೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿ ಸಲ್ಲಿಸಲಾಗಿರುವ ವರದಿ ಕುರಿತು ಇದುವರೆಗೆ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಕಾಂಗ್ರೆಸ್ ಇಂತಹ ಹಿಂಬಾಗಿಲ ರಾಜಕೀಯ ಬಿಟ್ಟು ಜನಪ್ರತಿನಿಧಿಗಳ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವಂತೆ ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಹಣಾಹಣಿ ಎಂಬ ಹೇಳಿಕೆ ಅನೇಕ ಕಡೆ ಕೇಳಿ ಬರುತ್ತಿದೆ. ಆದರೆ ಜೆಡಿಎಸ್ ಪಕ್ಷದ ಶಕ್ತಿ ಏನೆಂಬುದು ಮುಂದಿನ ಚುನಾವಣಾ ಫಲಿತಾಂಶ ತೋರಿಸಲಿದೆ ಎಂದು ಅವರು ಹೇಳಿದರು.
ಮತ್ತಷ್ಟು
ಹೈಕೋರ್ಟ್ ಮುಂಭಾಗದಲ್ಲಿ ಆತ್ಯಹತ್ಯೆಗೆ ಪ್ರಯತ್ನಿಸಿದ ವಕೀಲ
ಸಾಲದ ಬಾಧೆ: ಪತ್ನಿ ಸಹಿತ ಬಿಎಚ್ಇಎಲ್ ಅಧಿಕಾರಿ ಆತ್ಮಹತ್ಯೆ
ಕೋತಿಗಳ ಬದ್ಲು ಉಗ್ರರ ಹಿಡೀರಿ: ಚಿದಾನಂದ ಮೂರ್ತಿ
ನಗರಸಭೆ ಚುನಾವಣೆಯಲ್ಲಿ ಘರ್ಷಣೆ, ಲಾಠಿ ಪ್ರಹಾರ
ಮಂಚನಬೆಲೆ ಡ್ಯಾಂನಲ್ಲಿ ಇಬ್ಬರು ಜಲಸಮಾಧಿ
ಐಐಎಸ್ಸಿ ದಾಳಿ: ಸೂತ್ರದಾರಿ ಬಿಲಾಲ್ ಅಲ್ಲ, ಹಂಜಾ