ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೆ.14ಕ್ಕೆ ಚಿತ್ರೋದ್ಯಮ ಬಂದ್
ರೀಮೇಕ್ ಚಿತ್ರಗಳಿಗೂ ತೆರಿಗೆ ವಿನಾಯಿತಿ ಹಾಗೂ ಎಲ್ಲಾ ಕನ್ನಡ ಚಿತ್ರಗಳಿಗೂ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿ ಫೆಬ್ರವರಿ 14ರ ಗುರುವಾರದಂದು ಕನ್ನಡ ಚಿತ್ರೋದ್ಯಮ ಬಂದ್ ನಡೆಸಲು ನಿರ್ಮಾಪಕರ ಸಂಘ ತೀರ್ಮಾನಿಸಿದೆ.

ರೀಮೇಕ್ ಚಿತ್ರಗಳಿಗೆ ಸಹಾಯಧನವಾಗಲೀ ಪ್ರಶಸ್ತಿಯಾಗಲೀ ಬೇಡ. ಬದಲಿಗೆ ತೆರಿಗೆ ವಿನಾಯಿತಿ ನೀಡಿದರೆ ಸಾಕು. ಅಷ್ಟೇ ಅಲ್ಲದೇ ರೀಮೇಕ್ ಅಲ್ಲದ, ಅಶ್ಲೀಲತೆಯಿಂದ ಕೂಡಿರದ ಎಲ್ಲಾ ಕನ್ನಡ ಚಿತ್ರಗಳಿಗೂ ಸಹಾಯಧನ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.

ಈ ಬಂದ್‌ಗೆ ಕಲಾವಿದರ ಸಂಘ ಮತ್ತು ನಿರ್ದೇಶಕರ ಸಂಘದಿಂದ ಬೆಂಬಲ ಸಿಕ್ಕಿದ್ದು, ಈಗಾಗಲೇ ಚಿತ್ರೀಕರಣದ ಹಂತದಲ್ಲಿರುವ ಅನೇಕ ನಿರ್ಮಾಪಕರಿಗೆ ಇದರಿಂದ ಉಂಟಾಗಬಹುದಾದ ಸಂಭವನೀಯ ತೊಂದರೆಗಳ ಬಗೆಗೂ ಚರ್ಚಿಸಲು ಮಂಗಳವಾರ ಸಂಜೆ ಸಭೆ ಕರೆಯಲಾಗಿದೆ.

ಖ್ಯಾತ ನಿರ್ದೇಶಕ ಗೀರೀಶ್ ಕಾಸರವಳ್ಳಿ ನೇತೃತ್ವದ ಸಮಿತಿಯು ಸಹಾಯಧನ ನೀಡಿಕೆಗೆ ಕೇವಲ 26 ಚಿತ್ರಗಳನ್ನಷ್ಟೇ ಆಯ್ಕೆ ಮಾಡಿರುವ ಕ್ರಮವನ್ನು ಮಲತಾಯಿ ಧೋರಣೆ ಎಂದು ಆಪಾದಿಸಿ ಚಿತ್ರ ನಿರ್ಮಾಪಕ ಭಾ.ಮಾ.ಹರೀಶ್‌ ಅವರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮತ್ತಷ್ಟು
ಬೇಗ ಬೇಗ ಚುನಾವಣೆ ನಡೆಸಿ: ಕುಮಾರಸ್ವಾಮಿ ಒತ್ತಾಯ
ಹೈಕೋರ್ಟ್ ಮುಂಭಾಗದಲ್ಲಿ ಆತ್ಯಹತ್ಯೆಗೆ ಪ್ರಯತ್ನಿಸಿದ ವಕೀಲ
ಸಾಲದ ಬಾಧೆ: ಪತ್ನಿ ಸಹಿತ ಬಿಎಚ್ಇಎಲ್ ಅಧಿಕಾರಿ ಆತ್ಮಹತ್ಯೆ
ಕೋತಿಗಳ ಬದ್ಲು ಉಗ್ರರ ಹಿಡೀರಿ: ಚಿದಾನಂದ ಮೂರ್ತಿ
ನಗರಸಭೆ ಚುನಾವಣೆಯಲ್ಲಿ ಘರ್ಷಣೆ, ಲಾಠಿ ಪ್ರಹಾರ
ಮಂಚನಬೆಲೆ ಡ್ಯಾಂನಲ್ಲಿ ಇಬ್ಬರು ಜಲಸಮಾಧಿ