ಭೂಗತ ಲೋಕದಿಂದ ದೂರ ಸರಿದು ಸಹಜ ಬದುಕು ನಡೆಸಲು ಮುಂದಾಗಿರುವ ಮುತ್ತಪ್ಪ ರೈ ಜಯ ಕರ್ನಾಟಕ ಸಂಘಟನೆಯೊಂದನ್ನು ಹುಟ್ಟುಹಾಕಿದ್ದಾರೆ.
ಮಂಗಳವಾರ ಈ ವಿಷಯವನ್ನು ಪ್ರಕಟಿಸಿದ ಮುತ್ತಪ್ಪರೈ, ರಾಜ್ಯದ ಶಾಂತಿ ಹಾಗೂ ಏಳಿಗೆಗಾಗಿ ಈ ಸಂಘಟನೆಯನ್ನು ಹುಟ್ಟುಹಾಕಲಾಗಿದ್ದು, ಈ ಮೂಲಕ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಸಂಘಟನೆಯ ರೂಪುರೇಷೆಗಳನ್ನು ತಿಳಿಸಿದರು.
ಕನ್ನಡದ ನಾಡು-ನುಡಿ, ನೆಲ-ಜಲ, ಸಂಸ್ಕೃತಿಯನ್ನು ಕಾಪಾಡಲು ಈ ಸಂಸ್ಥೆ ನೆರವಾಗುತ್ತದೆ. ಬಡವರ ಉದ್ದಾರವೇ ಸಂಘಟನೆಯ ಮೂಲ ಧ್ಯೇಯ ಎಂದವರು ತಿಳಿಸಿದರು.
ಈ ಮಧ್ಯೆ ರಾಜಕೀಯಕ್ಕೆ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುತ್ತಪ್ಪರೈ, ಸಂಘಟನೆಯನ್ನು ಸಾರ್ವಜನಿಕರ ಏಳಿಗೆಗಾಗಿ ಮೀಸಲಿಡುತ್ತೇನೆ. ರಾಜಕೀಯಕ್ಕೆ ಸೇರುವ ಪ್ರಶ್ನೆಯೇ ಇಲ್ಲ. ಈ ಸಂಘಟನೆಯ ಮೂಲಕ ಹಳ್ಳಿಗಳಲ್ಲಿನ ಬಡವರಿಗೆ ಬೊರ್ವೆಲ್‌ಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.
|