ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುಷ್ಕರ್ಮಿಗಳ ಗುಂಡಿಗೆ ಕಾರ್ಮಿಕ ಬಲಿ
ಕಾಡಮನೆ ಅರಣ್ಯ ಪ್ರದೇಶದಲ್ಲಿ ಕೆಲಸಮಾಡುತ್ತಿರುವ ಸುಮಾರು 15 ಟಿಂಬರ್ ಕೂಲಿ ಕಾರ್ಮಿಕರ ಮೇಲೆ ಏಕಾಏಕಿ ನಾಡಕೋವಿಯಿಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಮೂವರಿಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡಿರುವ ಘಟನೆ ಮಂಗಳವಾರ ಹಾಸನದ ಸಕಲೇಶಪುರದಲ್ಲಿ ಸಂಭವಿಸಿದೆ.

ಕೇರಳ ಮೂಲದ ಕಾರ್ಮಿಕ ಶಿವರಾಮ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇತರ ಇಬ್ಬರನ್ನು ಸಕಲೇಶಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಕೂಲಿಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇಂತಹ ಪ್ರಕರಣಗಳು ಈ ಅರಣ್ಯ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸಕಲೇಶಪುರದಲ್ಲಿ ನಡೆದುಕೊಂಡು ಬಂದಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ತೀವ್ರ ವಿಚಾರಣೆಯನ್ನು ಮುಂದುವರೆಸಿದ್ದಾರೆ. ದಾಳಿಗೆ ಕಾರಣವೇನೆಂದು ತಕ್ಷಣಕ್ಕೆ ಗೊತ್ತಾಗಿಲ್ಲ.
ಮತ್ತಷ್ಟು
ಮುತ್ತಪ್ಪರೈಯಿಂದ ಜಯ ಕರ್ನಾಟಕ
ಲಾಲೂ ಕನ್ನಡಿಗರ ಕ್ಷಮೆಯಾಚಿಸಲಿ :ಕುಮಾರ್
ಫೆ.14ಕ್ಕೆ ಚಿತ್ರೋದ್ಯಮ ಬಂದ್
ಬೇಗ ಬೇಗ ಚುನಾವಣೆ ನಡೆಸಿ: ಕುಮಾರಸ್ವಾಮಿ ಒತ್ತಾಯ
ಹೈಕೋರ್ಟ್ ಮುಂಭಾಗದಲ್ಲಿ ಆತ್ಯಹತ್ಯೆಗೆ ಪ್ರಯತ್ನಿಸಿದ ವಕೀಲ
ಸಾಲದ ಬಾಧೆ: ಪತ್ನಿ ಸಹಿತ ಬಿಎಚ್ಇಎಲ್ ಅಧಿಕಾರಿ ಆತ್ಮಹತ್ಯೆ