ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜು.1ರಿಂದ ವೇಗ ನಿಯಂತ್ರಕ ಕಡ್ಡಾಯ: ಹೈ.ಕೋ
ಖಾಸಗಿ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯದ ಆದೇಶವನ್ನು ಮುಂದೂಡುತ್ತಿರುವ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ಜುಲೈ ಒಂದರಿಂದ ಇದನ್ನು ಜಾರಿಗೆ ತರಬೇಕೆಂಬ ಆದೇಶ ನೀಡಿದೆ.

ಜೂನ್ 30ರ ಒಳಗೆ ಹಳೆಯ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಬೇಕು. ಅಲ್ಲದೆ, ಸ್ಪೀಡ್ ಗವರ್ನರ್ ಅಳವಡಿಸದ ಹೊಸ ವಾಹನಗಳು ರಸ್ತೆಗಿಳಿಯುವಂತಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಕಟ್ಟುನಿಟ್ಟಾಗಿ ತಿಳಿಸಿದೆ.

2007ರ ಜುಲೈ 1ರ ನಂತರ ವೇಗ ನಿಯಂತ್ರಕ ಅಳವಡಿಸಿಕೊಳ್ಳದ ಅರ್ಹತಾ ಪತ್ರವನ್ನು ನವೀಕರಣಗೊಳಿಸಿಕೊಂಡಿರುವ ವಾಹನಗಳು ಫೆ. 12ರಿಂದ ತಿಂಗಳೊಳಗೆ ವೇಗ ನಿಯಂತ್ರಕವನ್ನು ಅಳವಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇತೃತ್ವದ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿ ಈ ಅಧಿಸೂಚನೆಯನ್ನು ಮೊದಲೇ ನೀಡಿದ್ದರೂ ಇದುವರೆಗೆ ಪಾಲಿಸದಿರುವ ಸರಕಾರವನ್ನು ತರಾಟೆ ತೆಗೆದುಕೊಂಡಿತು. ಅಲ್ಲದೆ, ಸರಕಾರ ಕಳೆದ ಜೂನ್ 26 ಹಾಗೂ ಈ ವರ್ಷದ ಜನವರಿ 22ರಂದು ಹೊರಡಿಸಿದ್ದ ಅಧಿಸೂಚನೆಗಳಿಗೆ ತಡೆಯಾಜ್ಞೆ ನೀಡಿತು.
ಮತ್ತಷ್ಟು
ನಾಳೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ
ರಾಜ್ಯಪಾಲರಿಗೇ ಖೋ?
ವರ್ಗಾವಣೆಯ ಅಡ್ಡೆಯಾದ ರಾಜಭವನ: ಅಶೋಕ್
ಸಾಹಿತಿ ಚಂಪಾ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ
ದುಷ್ಕರ್ಮಿಗಳ ಗುಂಡಿಗೆ ಕಾರ್ಮಿಕ ಬಲಿ
ಮುತ್ತಪ್ಪರೈಯಿಂದ ಜಯ ಕರ್ನಾಟಕ