ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಲೂ ವಿರುದ್ಧ ಕರವೇ ಪ್ರತಿಭಟನೆ
PTIPTI
ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ವೇಳೆ ನೀಡರಿರುವ ಹೇಳಿಕೆಯಿಂದ ಆಕ್ರೋಶಿತರಾಗಿರುವ ಕರವೇ ಕಾರ್ಯಕರ್ತರು ನೈರುತ್ಯ ರೈಲ್ವೆ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

ಲಾಲೂ ಹೇಳಿಕೆಯನ್ನು ಖಂಡಿಸಿ ನೈರುತ್ಯ ರೈಲ್ವೆ ಕಚೇರಿಗೆ ನುಗ್ಗಿದ ಕರವೇ ಕಾರ್ಯಕರ್ತರು ಪಿಠೋಪಕರಣಗಳನ್ನು ಧ್ವಂಸ ಮಾಡಿ, ಲಾಲೂ ವಿರುದ್ಧ ಘೋಷಣೆಗಳನ್ನು ಕೂಗಿದರು. ಲಾಲೂ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಪ್ರತಿಭಟನೆಗೆ ನಡೆಸುವುದಾಗಿ ಕರವೇ ಹೇಳಿದೆ.

ರೈಲ್ವೆ ಇಲಾಖೆಯಲ್ಲಿ ಆದ್ಯತೆ ಹಾಗೂ ಅರ್ಹತೆ ಮೇಲಿನ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಿಲ್ಲ ಎಂಬ ಲಾಲೂ ಹೇಳಿಕೆ ಕರವೇ ಕಾರ್ಯಕರ್ತರನ್ನು ಕೆರಳಿಸಿದ್ದು, ಈ ಪ್ರತಿಭಟನೆಗೆ ಕಾರಣವಾಗಿದೆ. ಅಲ್ಲದೆ, ಕನ್ನಡಿಗರ ಬಗ್ಗೆ ಕುಹುಕವಾಡಿದ್ದಾರೆಂದು ಆರೋಪಿಸಿರುವ ಕರವೇ ಕಾರ್ಯಕರ್ತರು, ಇನ್ನು ಮುಂದೆ ಸಚಿವರನ್ನು ರಾಜ್ಯಕ್ಕೆ ಬರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಲಾಲೂ ಹೇಳಿಕೆಯನ್ನು ಅನೇಕ ರಾಜಕೀಯ ಪಕ್ಷಗಳು ಖಂಡಿಸಿದ್ದು, ಈ ಬಗ್ಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ಮೈಸೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಲಾಲೂ ವಿರುದ್ಧ ಪ್ರತಿಭಟನೆ ನಡೆದಿದೆ.
ಮತ್ತಷ್ಟು
ಜು.1ರಿಂದ ವೇಗ ನಿಯಂತ್ರಕ ಕಡ್ಡಾಯ: ಹೈ.ಕೋ
ನಾಳೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ
ರಾಜ್ಯಪಾಲರಿಗೇ ಖೋ?
ವರ್ಗಾವಣೆಯ ಅಡ್ಡೆಯಾದ ರಾಜಭವನ: ಅಶೋಕ್
ಸಾಹಿತಿ ಚಂಪಾ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ
ದುಷ್ಕರ್ಮಿಗಳ ಗುಂಡಿಗೆ ಕಾರ್ಮಿಕ ಬಲಿ