ತೆರೆದ ಹೃದಯದ ಶಸ್ತ್ರಚಿಕಿತ್ಸೆಯ ನಂತರದ ವಿಶ್ರಾಂತಿಯಿಂದ ಸಕ್ರಿಯ ರಾಜಕಾರಣಕ್ಕೆ ಮರಳಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಫೆಬ್ರವರಿ 16ರಿಂದ ರಾಜ್ಯವ್ಯಾಪಿ ಪ್ರವಾಸಕ್ಕೆ ಮುಂದಾಗಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷವನ್ನು ಮತ್ತೊಮ್ಮೆ ಬುಡಮಟ್ಟದಿಂದ ಸಂಘಟಿಸುವ ಸಲುವಾಗಿ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳ ಸಾಮರ್ಥ್ಯಕ್ಕನುಗುಣವಾಗಿ ಎ, ಬಿ ಮತ್ತು ಸಿ ಎಂದು ವರ್ಗೀಕರಣ ಮಾಡಿ ಚುನಾವಣಾ ಸ್ಪರ್ಧಿಗಳಿಗೆ ಟಿಕೆಟ್ ಹಂಚಲಾಗುವುದು. ಇದಕ್ಕೆಂದೇ ರಚಿಸಲಾಗಿರುವ 9 ಸದಸ್ಯರ ಸಮಿತಿ ಈ ಕುರಿತು ಅಂತಿಮ ತೀರ್ಪು ತೆಗೆದುಕೊಳ್ಳುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಮಾಜಿ ಸಚಿವ ಬಿಜೆಪಿಯ ಆರ್.ಅಶೋಕ್ ಅವರು ಜನರಿಗೆ ಅಕ್ಕಿ, ಸೀರೆ, ನೋಟ್‌ಬುಕ್ ಹಂಚುತ್ತಿರುವುದರ ಕುರಿತು ಪ್ರಸ್ತಾಪಿಸಿದ ಕುಮಾರಸ್ವಾಮಿಯವರು, ಇದೆಲ್ಲಾ ಪಾಪದ ಹಣ. ಭೂಕಬಳಿಕೆಯಿಂದ ಗಳಿಸಿದ ಪಾಪದ ಹಣವನ್ನು ಜನರಿಗೆ ನೀಡುವ ಮೂಲಕ ಪಾಪವನ್ನು ಜನರ ಮೇಲೆ ಹೇರುತ್ತಿದ್ದಾರೆ ಎಂದು ಆಪಾದಿಸಿದರು.
|