ಕನ್ನಡ ಹೋರಾಟಗಾರರನ್ನು 'ಕೊಳಕು ಜನ' ಎಂದಿರುವ ಕೇಂದ್ರ ರೈಲ್ವೆ ಮಂತ್ರಿ ಲಾಲೂ ಪ್ರಸಾದ್ ಯಾದವ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣ ಗೌಡ, ಇಲ್ಲವಾದರೆ ಬಿಹಾರಿಗಳ ವಿರುದ್ಧ ಕರ್ನಾಟಕ ಬಿಟ್ಟು ತೊಲಗಿ ಹೋರಾಟವನ್ನು ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
"ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಿಗರು ನಡೆಸುತ್ತಿರುವ ನ್ಯಾಯೋಚಿತ ಹೋರಾಟಕ್ಕೆ ಕಳಂಕ ಹಚ್ಚುವುದು ಸರಿಯಲ್ಲ. ಲಾಲೂ ಪ್ರಸಾದರ ಈ ವರ್ತನೆ ಹದ್ದು ಮೀರಿದೆ. ಅವರ ಹೇಳಿಕೆಯ ಪರಿಣಾಮವಾಗಿ ಕರ್ನಾಟಕದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ಕೇಂದ್ರ ಸರ್ಕಾರ ಮತ್ತು ಲಾಲೂ ಅವರೇ ಹೊಣೆಯಾಗಬೇಕಾಗುತ್ತದೆ" ಎಂದು ಹೇಳಿದ್ದಾರೆ.
ಹೊಸ ನೇಮಕವನ್ನು ಕೂಡಲೇ ಆರಂಭಿಸಿ ಕನ್ನಡಿಗರಿಗೆ ಆದ್ಯತೆ ನೀಡದಿದ್ದಲ್ಲಿ ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ ಬಿಹಾರಿಗಳನ್ನು ಬಲವಂತವಾಗಿ ರೈಲಿನಲ್ಲಿ ತುಂಬಿಸಿ ಕಳಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ನಾರಾಯಣ ಗೌಡ, ಇದು ಆಗಬಾರದು ಎನ್ನುವಂತಿದ್ದರೆ ಲಾಲೂ ಒಂದು ದಿನದೊಳಗಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
|