ಪೊಲೀಸರ ವಶದಲ್ಲಿರುವ ಶಂಕಿತ ಲಷ್ಕರೆ-ಇ-ತೋಯ್ಬಾ ಉಗ್ರರಾದ ರಿಯಾಜುದ್ದೀನ್ ನಾಸಿರ್ ಮತ್ತು ಮೊಹಮ್ಮದ್ ಗೌಸ್ ಅವರುಗಳನ್ನು ನಗರದ ಆಸ್ಪತ್ರೆಯಲ್ಲಿ ಎರಡನೇ ಬಾರಿಗೆ ಮಂಪರು ಪರೀಕ್ಷೆಗೊಡ್ಡಲಾಗಿದೆ ಎಂದು ಸಿಒಡಿ ಐಜಿಪಿ ಅಜಯು ಕುಮಾರ್ ಸಿಂಗ್ ಹೇಳಿದ್ದಾರೆ. ಹಿಂದಿನ ಮಂಪರು ಪರೀಕ್ಷೆ ಸಂಪೂರ್ಣಗೊಳ್ಳದ ಕಾರಣ ಈ ಪರೀಕ್ಷೆ ಅವಶ್ಯಕವಾಗಿತ್ತು ಎಂಬುದಾಗಿ ಅವರು ತಿಳಿಸಿದರು.ಇಂದಿನ ಪರೀಕ್ಷೆ ಯಶಸ್ವಿಯಾಗಿದೆ. ರಾಜ್ಯದಲ್ಲಿ ಇವರ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಾಗಿವೆ ಎಂದು ಅವರು ನುಡಿದರಾದರೂ ಹೆಚ್ಚಿನ ಮಾಹಿತಿ ನೀಡಿಲ್ಲ.ಗೋವಾದಿಂದ