ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಬ್ರಾಹಿಂಗೆ ಬಿಜೆಪಿ ಸ್ವಾಗತ
ಜೆಡಿಎಸ್ ಪಕ್ಷ ತೊರೆದು ಕಳೆದ ಎರಡು ವರ್ಷಗಳಿಂದ ಯಾವುದೇ ಪಕ್ಷವನ್ನು ಸೇರದೆ ತಟಸ್ಥವಾಗಿರುವ ಮುಸ್ಲಿಂ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಬಿಜೆಪಿಯತ್ತ ವಾಲುತ್ತಿದ್ದಾರೆ ಎಂದು ಹೇಳಲಾಗಿದೆ.

ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಅಡ್ವಾಣಿಯವರು ಸ್ವತಃ ಇಬ್ರಾಹಿಂ ಬಿಜೆಪಿ ಸೇರ್ಪಡೆಗೆ ಹಸಿರು ನಿಶಾನೆ ನೀಡಿದ್ದಾರೆ. ಇವರಿಬ್ಬರೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಜೈಲಿನಲ್ಲಿದ್ದಾಗ ಒಳ್ಳೆಯ ಸ್ನೇಹಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಇಬ್ರಾಹಿಂ ಅವರನ್ನು ಬಿಜೆಪಿ ಸೇರುವುದಕ್ಕೆ ಅಡ್ವಾಣಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಎಸ್ ಪಕ್ಷ ತೊರೆದ ಬಳಿಕ ಇಬ್ರಾಹಿಂ, ಕಾಂಗ್ರೆಸ್ ಸೇರುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕರೆನಿಸಿರುವ ಸಿ.ಕೆ. ಜಾಫರ್ ಅಡ್ಡಗಾಲಿಟ್ಟರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮುಸ್ಲಿಮರ ಪ್ರಾಬಲ್ಯ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಇಬ್ರಾಹಿಂ ಮೂಲಕ ಮುಸ್ಲಿಮರ ಮತಗಳನ್ನು ಪಡೆಯಬಹುದು ಹಾಗೂ ಈ ಭಾಗದಲ್ಲಿರುವ ಜೆಡಿಎಸ್ ಪ್ರಾಬಲ್ಯವನ್ನು ಹತ್ತಿಕ್ಕಬಹುದು ಎಂಬುದು ಬಿಜೆಪಿ ಲೆಕ್ಕಚಾರ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಅನಂತಕುಮಾರ್ ಕೂಡ ಸಮ್ಮತಿಸಿದ್ದ, ದಿನಗಳ ಹಿಂದೆಯೇ ಮೊದಲ ಸುತ್ತಿನ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

ಇನ್ನೊಂದು ಮೂಲದ ಪ್ರಕಾರ, ರಾಜ್ಯ ವಿಧಾನಸಭೆಗೆ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚುನಾವಣೆಗೆ ತೆರಳುವ ಸೂಚನೆಗಳು ಕಂಡು ಬರುತ್ತಿವೆ. ಈ ನಿಟ್ಟಿನಲ್ಲಿ ಇನ್ನೂ ಕಾಲಾವಕಾಶ ಇರುವುದರಿಂದ ಇಬ್ರಾಹಿಂರ ಅಂತಿಮ ನಿರ್ಧಾರ ಇನ್ನೂ ವಿಳಂಬವಾಗುವ ಸಾಧ್ಯತೆಗಳಿವೆ.
ಮತ್ತಷ್ಟು
ಬಂಧಿತ ಉಗ್ರರಿಗೆ ಮತ್ತೆ ಮಂಪರು ಪರೀಕ್ಷೆ
'ಡರ್ಟಿ ಪೀಪಲ್': ಲಾಲೂ ಕ್ಷಮೆ ಯಾಚನೆಗೆ ಒತ್ತಾಯ
ಅಖಾಡಕ್ಕೆ ಮರಳಿದ ಕುಮಾರ್; 16ರಿಂದ ಪ್ರವಾಸ
ಠಾಕೂರ್ ಎತ್ತಂಗಡಿ ಕೇವಲ ವದಂತಿ: ಖರ್ಗೆ
ಇಂದಿರಾನಗರ ಕೊರಿಯರ್ ಕಚೇರಿಯಲ್ಲಿ ಬಾಂಬ್ ಪತ್ತೆ
ರಾಯಚೂರು ನಗರಸಭೆ: ಬಿಜೆಪಿಗೆ ಜೆಡಿಎಸ್ ಬೆಂಬಲ