ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ವಿರುದ್ಧ ಮೃದು ಧೋರಣೆ ಸಲ್ಲ: ಅಡ್ವಾಣಿ
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ತಳೆಯದೆ ಕಠಿಣ ನಿಲುವು ಹೊಂದಬೇಕು ಎಂದು ಮಾಜಿ ಉಪಪ್ರಧಾನಿ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ಎಲ್.ಕೆ. ಅಡ್ವಾಣಿ ಪ್ರತಿಪಾದಿಸಿದ್ದಾರೆ.

ಶ್ರೀಶೈಲ ಎಜುಕೇಷನ್ ಟ್ರಸ್ಟ್‌ನ ಎಂ.ಜಿ. ಇಂಜಿನಿಯರಿಂಗ್ ಕಾಲೇಜು ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, "ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಉಗ್ರರ ತಾಣವಾಗಿರುವುದು ಆತಂಕ ಉಂಟು ಮಾಡಿದೆ. ಅಂತಾರಾಷ್ಟ್ರೀಯ ಭಯೋತ್ಪಾದನೆ ಸಂಘಟನೆಯೊಂದಿಗೆ ಸಂಪರ್ಕವಿರುವ ರಾಜ್ಯದ ಉಗ್ರಗಾಮಿ ಸಂಘಟನೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿರುವುದು ಆತಂಕ ಸೃಷ್ಟಿಸಿದೆ. ಇಂತಹ ವಿಷಯಗಳಲ್ಲಿ ಸರಕಾರ ಕಠಿಣ ನಿಲುವನ್ನು ತಾಳುವುದು ಅಗತ್ಯವಾಗಿದೆ" ಎಂದು ನುಡಿದರು.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿರುವ ಉಗ್ರರು ಐಐಎಸ್ಸಿ ದಾಳಿಯಲ್ಲಿ ಭಾಗಿಯಾಗಿರುವುದು ಹಾಗೂ ಮುಂಬೈ ಶೇರು ವಿನಿಮಯ ಕೇಂದ್ರದ ಮೇಲೆ ದಾಳಿಯ ಹುನ್ನಾರ ನಡೆಸಿರುವುದು ಬೆಳಕಿಗೆ ಬಂದಿದೆ. ಇದೊಂದು ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಭಯೋತ್ಪಾದನೆ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಎನ್‌ಡಿಎ ಸರಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು ಎಂದ ಅವರು, ಆಂತರಿಕ ಭದ್ರತೆಯನ್ನು ಕಾಪಾಡುವುದಕ್ಕೆ ಪಣ ತೊಡಬೇಕೆಂದು ಹೇಳಿದರು.
ಮತ್ತಷ್ಟು
ಇಬ್ರಾಹಿಂಗೆ ಬಿಜೆಪಿ ಸ್ವಾಗತ
ಬಂಧಿತ ಉಗ್ರರಿಗೆ ಮತ್ತೆ ಮಂಪರು ಪರೀಕ್ಷೆ
'ಡರ್ಟಿ ಪೀಪಲ್': ಲಾಲೂ ಕ್ಷಮೆ ಯಾಚನೆಗೆ ಒತ್ತಾಯ
ಅಖಾಡಕ್ಕೆ ಮರಳಿದ ಕುಮಾರ್; 16ರಿಂದ ಪ್ರವಾಸ
ಠಾಕೂರ್ ಎತ್ತಂಗಡಿ ಕೇವಲ ವದಂತಿ: ಖರ್ಗೆ
ಇಂದಿರಾನಗರ ಕೊರಿಯರ್ ಕಚೇರಿಯಲ್ಲಿ ಬಾಂಬ್ ಪತ್ತೆ