ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರಿಂದ ಮಹತ್ವದ ಮಾಹಿತಿ ಸಂಗ್ರಹ
ಬಂಧಿತ ಉಗ್ರ ಅಸಾದುಲ್ಲಾನ ಜೊತೆಯಲ್ಲಿ ಬೆಳಗಾವಿಗೆ ತೆರಳಿರುವ ಸಿಓಡಿ ಪೊಲೀಸರು ಉಗ್ರರು ಕ್ಯಾಸಲ್ರಾಕ್ ಸಭೆ ನಡೆಯುಸುತ್ತಿದ್ದ ಸ್ಥಳ ಹಾಗೂ ಸಭೆಯಲ್ಲಿ ಭಾಗವಹಿಸುತ್ತಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಇನ್ನಷ್ಟು ಮಾಹಿತಿಗಾಗಿ ಬಿಜಾಪುರಕ್ಕೆ ತೆರಳಿದ್ದಾರೆ.

ಈ ಮಧ್ಯೆ ತಿಂಗಳಿಗೆ ಮೂರು ಬಾರಿ ಸದಸ್ಯರ ರಹಸ್ಯ ಸಭೆಗಳನ್ನು ನಡೆಸಲಾಗುತ್ತಿತ್ತು ಎಂಬ ಅಂಶ ಮಂಗಳವಾರ ರಾತ್ರಿ ಬಂಧಿಸಲಾಗಿರುವ ಇನ್ನೊಬ್ಬ ಉಗ್ರಗಾಮಿ ಶಕೀಲ್‌ನಿಂದ ಬಹಿರಂಗಗೊಂಡಿದೆ. ಅಲ್ಲದೆ, ಡಿಸೆಂಬರ್ 6 ಮತ್ತು 7ರಂದು ಹಳ್ಳಿಗೇರಿಯ ಕಾಡಿನಲ್ಲಿ ನಡೆದ ರಹಸ್ಯ ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿತ್ತು ಎಂಬುದನ್ನೂ ಈತ ತಿಳಿಸಿದ್ದಾನೆ.

ಮಹತ್ವದ ಎರಡು ದಿನಗಳ ಸಭೆಯಲ್ಲಿ ಸಿಮಿಯನ್ನು ಸಂಘಟಿಸಿ ಜಿಹಾದಿ ಹೋರಾಟ ತೀವ್ರಗೊಳಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಈ ಮಧ್ಯೆ ಕ್ಯಾಸಲ್ರಾಕ್ ಸಭೆಗೆ ಮಿರ್ಜಾ ಬೇಗ್ ಮತ್ತು ಆಸಿಫ್ ಗುರು ಅದ್ನಾನ್ ಹಣವನ್ನು ನೀಡುತ್ತಿದ್ದರು ಎಂಬ ಅಂಶವನ್ನು ಶಕೀಲ್ ಬಹಿರಂಗ ಪಡಿಸಿದ್ದಾನೆ. ಪ್ರಸ್ತುತ ಸಿಓಡಿ ಪೊಲೀಸರು ಮಿರ್ಜಾ ಮತ್ತು ಅದ್ನಾನ್ ಹುಡುಕಾಟದಲ್ಲಿದ್ದಾರೆ.

ಮಾಹಿತಿಗಳು ಬಹಿರಂಗಗೊಂಡರೆ ತನಿಖೆಗೆ ಅಡ್ಡಿಯಾಗಬಹುದೆಂಬ ದೃಷ್ಟಿಯಿಂದ ಸಿಓಡಿ ಪೊಲೀಸರು ಮಹತ್ವದ ಅಂಶಗಳನ್ನು ಗುಪ್ತವಾಗಿ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಉಗ್ರರ ವಿರುದ್ಧ ಮೃದು ಧೋರಣೆ ಸಲ್ಲ: ಅಡ್ವಾಣಿ
ಇಬ್ರಾಹಿಂಗೆ ಬಿಜೆಪಿ ಸ್ವಾಗತ
ಬಂಧಿತ ಉಗ್ರರಿಗೆ ಮತ್ತೆ ಮಂಪರು ಪರೀಕ್ಷೆ
'ಡರ್ಟಿ ಪೀಪಲ್': ಲಾಲೂ ಕ್ಷಮೆ ಯಾಚನೆಗೆ ಒತ್ತಾಯ
ಅಖಾಡಕ್ಕೆ ಮರಳಿದ ಕುಮಾರ್; 16ರಿಂದ ಪ್ರವಾಸ
ಠಾಕೂರ್ ಎತ್ತಂಗಡಿ ಕೇವಲ ವದಂತಿ: ಖರ್ಗೆ