ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ
ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರು ನರ್ಸ್ ಒಬ್ಬರ ಮೇಲೆ ಅಲ್ಲಿನ ಸ್ಥಾನಿಕ ವೈದ್ಯ ಡಾ| ಶರಣಪ್ಪ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಸಂಭವಿಸಿದೆ.

ಹಲವು ದಿನಗಳಿಂದಲೂ ದಾದಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಈತ ಗುರುವಾರ ತನ್ನ ಕೊಠಡಿಯಲ್ಲಿ ಈ ದುಷ್ಕೃತ್ಯಕ್ಕೆ ಪ್ರಯತ್ನಿಸಿದಾಗ, ಸುದ್ದಿ ತಿಳಿದ ಸಾರ್ವಜನಿಕರು ಆಕ್ರೋಶಗೊಂಡು ಆತನನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಬೀಗ ಜಡಿದರು ಎಂದು ತಿಳಿದುಬಂದಿದೆ.

ಕಳೆದ 7 ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಾದಿಯನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ ಡಾ| ಶರಣಪ್ಪ ಇತ್ತೀಚೆಗೆ ಕಳೆದ ಕೆಲದಿನಗಳಿಂದ ತೀರಾ ಆಶ್ಲೀಲವಾಗಿ ಅವರನ್ನು ಮಾತನಾಡಿಸುತ್ತಿದ್ದನೆಂಬ ಅಂಶ ಬಯಲಾಗಿದೆ. ಈಗ ವೈದ್ಯನ ಅಸಭ್ಯ ವರ್ತನೆಗಾಗಿ ಜಿಲ್ಲಾ ಸರ್ಜನ್ ಕಾಮರೆಡ್ಡಿ, ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ದಾದಿ ದೂರು ಸಲ್ಲಿಸಿದ್ದಾರೆ.

ಈ ಪ್ರಕರಣವನ್ನು ಕುರಿತು ಪ್ರತಿಕ್ರಿಯಿಸಿರುವ ಸರ್ಜನ್ ಕಾಮರೆಡ್ಡಿಯವರು ಡಾ| ಶರಣಪ್ಪ ವಿರುದ್ಧ ಅಗತ್ಯ ಶಿಸ್ತು ಕ್ರಮ ಕೈಗೊಳ್ಳುವುದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು
ಬಿಜೆಪಿಯಿಂದ ರಾಜ್ಯವ್ಯಾಪ್ತಿ ಆಂದೋಲನದ ಚಿಂತನೆ
ಕಳ್ಳನಾಟಾ ಸಾಗಾಟಗಾರರ ಮೇಲೆ ಗುಂಡು, ಓರ್ವನ ಸಾವು
ಲಾಲೂ ಹೇಳಿಕೆ: ಪ್ರತಿಭಟನೆ, ರೈಲ್ವೇ ಕಚೇರಿಯಲ್ಲಿ ದಾಂಧಲೆ
ಉಗ್ರರಿಂದ ಮಹತ್ವದ ಮಾಹಿತಿ ಸಂಗ್ರಹ
ಉಗ್ರರ ವಿರುದ್ಧ ಮೃದು ಧೋರಣೆ ಸಲ್ಲ: ಅಡ್ವಾಣಿ
ಇಬ್ರಾಹಿಂಗೆ ಬಿಜೆಪಿ ಸ್ವಾಗತ