ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಶ್ಚಿಮ ಘಟ್ಟದಲ್ಲಿ ಸಿಮಿ ಉಗ್ರರ ನಿಯಮಿತ ಸಭೆ!
ನಿಷೇಧಿತ ಸಿಮಿ ಉಗ್ರಗಾಮಿ ಸಂಘಟನೆಯ 32 ಮಂದಿ ಕಾರ್ಯಕರ್ತರು ಗೋವಾ-ಕರ್ನಾಟಕ ಗಡಿ ಭಾಗದ ಪಶ್ಚಿಮ ಘಟ್ಟ ಪ್ರದೇಶದ ಕ್ಯಾಸಲ್‌ರಾಕ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮಂಗಳವಾರ ರಾತ್ರಿ ಬಂಧಿತನಾಗಿರುವ ಶಕೀಲ್ ಮಾಲಿ (ಶಂಕಿತ ಭಯೋತ್ಪಾದಕ ಆಸಿಫ್ ಮೊಹಮದ್ ಸಹಚರ) ಬಾಯಿಬಿಟ್ಟಿದ್ದಾನೆ.

ಧಾರವಾಡದ ಕಾರ್ಯಕರ್ತರು ವಾಹನವೊಂದನ್ನು ಬಾಡಿಗೆಗೆ ಪಡೆದು ಅದರಲ್ಲಿ ಸಭೆಗೆ ತೆರಳಿದ್ದರು ಎಂಬುದಾಗಿ ಸಿಒಡಿ ಮೂಲಗಳು ತಿಳಿಸಿವೆ. ಸಭೆಯಲ್ಲಿ ಭಾಗವಹಿಸಿದ್ದ ಸಿಮಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ ಎಂದು ಈ ಮೂಲಗಳು ಹೇಳಿವೆ.

ಪ್ರತಿ ತಿಂಗಳು ಮೂರು ಬಾರಿ ನಡೆಯುತ್ತಿದ್ದ ಸಿಮಿ ಸಭೆಗೆ ತಾನು ಜನರನ್ನು ಕರೆತರುತ್ತಿದ್ದುದಾಗಿಯೂ ಶಕೀಲ್ ಬಹಿರಂಗಪಡಿಸಿದ್ದಾನೆ.

ಶಂಕಿತ ಉಗ್ರ ಅಬ್ದುಲ್ಲಾನ ವಿಚಾರಣೆ ನಡೆಸುತ್ತಿರುವ ಮತ್ತೊಂದು ಸಿಒಡಿ ತಂಡವು ಹೆಚ್ಚಿನ ತನಿಖೆಗಾಗಿ ಬೆಳಗಾವಿ ಮತ್ತು ಬಿಜಾಪುರಕ್ಕೆ ತೆರಳಿದೆ. ಬೆಳಗಾವಿಯ ಹೋಟೆಲ್ ಮಾಲೀಕ ಹಾಗೂ ಮಾಜಿ ಉಪಮೇಯರ್ ಪುತ್ರನೂ ಆಗಿರುವ ಫಿರೋಜ್ ಸನದಿಯನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ.

ಇದೇ ವೇಳೆ, ಪ್ರಮೋದ್ ಮುತಾಲಿಕ್ ಅವರ ರಾಷ್ಟ್ರೀಯ ಹಿಂದೂ ಸೇನಾ ಮೇಲಿನ ನಿಷೇಧ ವಿಸ್ತರಿಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಾಳಿ ಮತ್ತು ಇಸ್ಮಾಯಿಲ್ ಕಲೇಬುಡ್ಡೆ ಅವರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮತ್ತಷ್ಟು
ದಾದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ
ಬಿಜೆಪಿಯಿಂದ ರಾಜ್ಯವ್ಯಾಪ್ತಿ ಆಂದೋಲನದ ಚಿಂತನೆ
ಕಳ್ಳನಾಟಾ ಸಾಗಾಟಗಾರರ ಮೇಲೆ ಗುಂಡು, ಓರ್ವನ ಸಾವು
ಲಾಲೂ ಹೇಳಿಕೆ: ಪ್ರತಿಭಟನೆ, ರೈಲ್ವೇ ಕಚೇರಿಯಲ್ಲಿ ದಾಂಧಲೆ
ಉಗ್ರರಿಂದ ಮಹತ್ವದ ಮಾಹಿತಿ ಸಂಗ್ರಹ
ಉಗ್ರರ ವಿರುದ್ಧ ಮೃದು ಧೋರಣೆ ಸಲ್ಲ: ಅಡ್ವಾಣಿ