ಪೊಲೀಸರ ವಶದಲ್ಲಿರುವ ಶಂಕಿತ ಉಗ್ರ ಕಿಮ್ಸ್ ವಿದ್ಯಾರ್ಥಿ ಆಸಿಫ್‌ಗೆ ಆಸಿಫ್‌ಗೆ ಜಾಮೀನು ನೀಡದಂತೆ ಸಿಓಡಿಯು ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಆಸಿಫ್ ಜಾಮೀನು ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಹೊನ್ನಾಳಿ ನ್ಯಾಯಾಲಯವು ಈ ತಿಂಗಳ 18ಕ್ಕೆ ಮುಂದೂಡಿದೆ.
ಸಿಓಡಿ ಆಸಿಫ್ ವಿರುದ್ಧ ಸುಮಾರು 26 ಕಾರಣಗಳನ್ನು ನ್ಯಾಯಾಲಯಕ್ಕೆ ನೀಡಿದ್ದು, ಇದರಲ್ಲಿ ಆತ, ಅಂತಾರಾಷ್ಟ್ರೀಯ ಭಯೋತ್ಪಾದಕನಾಗಿದ್ದರಿಂದ ಆತನಿಗೆ ಜಾಮೀನು ನೀಡಬಾರದೆಂದು ಅರ್ಜಿಯಲ್ಲಿ ಸಿಓಡಿ ಹೇಳಿದೆ.
ಆಸಿಫ್ ಸಲ್ಲಿಸಿರುವ ಅರ್ಜಿ ಕಾನೂನು ಬಾಹಿರವಾಗಿದೆ. ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಸಿಮಿ ಸಂಘಟನೆಯಲ್ಲಿ ಈತ ಭಾಗಿಯಾಗಿದ್ದಾನೆ. ಅಲ್ಲದೆ, ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾನೆ ಹಾಗೂ ಈತನಿಗೆ ಜಾಮೀನು ನೀಡಿದರೆ ಆಂತರಿಕ ಭದ್ರತೆಗೆ ಹಾನಿಯಾಗುತ್ತದೆ ಎಂದು ಸಿಓಡಿ ತನ್ನ ಮನವಿಯಲ್ಲಿ ಹೇಳಿದೆ.
ಈ ಮಧ್ಯೆ ಆಸಿಫ್ ಪರ ಅರ್ಜಿಯನ್ನು ಸಲ್ಲಿಸಿರುವ ವಕೀಲರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆಸಿಫ್ ಪರ ಅರ್ಜಿ ಸಲ್ಲಿಸಿರುವ ವಕೀಲರ ಮನೆ ಮೇಲೆ ದಾಳಿ ನಡೆಸಿದ್ದು, ಸಾರ್ವಜನಿಕರು ಕಲ್ಲು ತೂರಾಟ ಪ್ರಾರಂಭಿಸಿದ್ದಾರೆ.
ಉಗ್ರರ ಜೊತೆ ನಂಟು ಇರುವ 12 ಉಗ್ರರಲ್ಲಿ 5 ಜನರನ್ನು ಸಿಓಡಿ ಪೊಲೀಸರು ಇದೀಗಾಗಲೆ ಬಂಧಿಸಿದ್ದು, ಉಳಿದವರಿಗಾಗಿ ತೀವ್ರ ತನಿಖೆ ಆರಂಭಿಸಿದೆ.
|