ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಪಾಲರಿಂದ ಸಂಸದರ ಸಭೆ
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಇರುವುದರಿಂದ ಮುಂಬರುವ ರಾಜ್ಯ ಬಜೆಟನ್ನು ಕೇಂದ್ರ ಸರಕಾರ ಮಂಡಿಸಲಿದ್ದು, ಈ ಬಗ್ಗೆ ರಾಜ್ಯದ ಜನ ಪ್ರತಿನಿಧಿಗಳ ಅಭಿಪ್ರಾಯವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯಪಾಲರು ಶುಕ್ರವಾರ ರಾಜಭವನದಲ್ಲಿ ಸಂಸದರ ಸಭೆ ನಡೆಸಿದರು.

ಜನಪರ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ರಾಜ್ಯ ಬಜೆಟ್ ಪೂರ್ವ ತಯಾರಿಯಾಗಿ ರಾಜ್ಯದ ಸಂಸದರು ಕಾರ್ಯದರ್ಶಿಗಳು ಭಾಗವಹಿಸಿದ ಸಭೆಯಲ್ಲಿ, ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಈ ಹಿಂದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಂಡಿಸಿರುವ ಬಜೆಟ್ ಅನುಷ್ಠಾನವನ್ನು ಜಾರಿಗೆ ತರುವ ಕುರಿತು ಚರ್ಚಿಸಲಾಯಿತು. ಅಲ್ಲದೆ, ರಾಜ್ಯದ ಅಭಿವೃದ್ಧಿಗಳ ಮಾಹಿತಿ ಸಂಗ್ರಹಣೆ, ಕೃಷಿ, ನೀರಾವರಿ ಸೇರಿದಂತೆ ರೈತ ಪರ ಯೋಜನೆಗಳ ಕುರಿತು ಚರ್ಚೆ ಹೀಗೆ ಮೊದಲಾದ ವಿಷಯಗಳ ಬಗ್ಗೆ ಸಂಸದರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.

ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ನೀಡಬೇಕಾಗಿರುವ ಯೋಜನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಂಸದ ಅಂಬರೀಷ್, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಹೊರತಾಗಿ ಉಳಿದಂತೆ ಎಲ್ಲಾ ಜನಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮತ್ತಷ್ಟು
ಆಸಿಫ್‌ಗೆ ಜಾಮೀನು ನೀಡದಂತೆ ಸಿಓಡಿ ಮನವಿ
ಪ್ರತಿಭಟನೆ ನೆಪದಲ್ಲಿ ಪುಂಟಾಟಿಕೆ ನಡೆಸಿದಲ್ಲಿ ಉಗ್ರಕ್ರಮ
ನಿಪ್ಪಾಣಿಯಲ್ಲಿ ಬಾಂಬ್ ತಯಾರಿಕೆಗಿಳಿದಿದ್ದ ಉಗ್ರರು
ಬಿಜೆಪಿಯಿಂದ ಜನಾದೇಶಕ್ಕೋಸ್ಕರ ಜನಾಕ್ರೋಶ
ಪಶ್ಚಿಮ ಘಟ್ಟದಲ್ಲಿ ಸಿಮಿ ಉಗ್ರರ ನಿಯಮಿತ ಸಭೆ!
ದಾದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ