ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಧನ ಬೆಲೆ ಏರಿಕೆ ಪ್ರತಿಭಟನೆ; ಅಲ್ಲಲ್ಲಿ ರಸ್ತೆತಡೆ
ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಹಾಗೂ ಎಡಪಕ್ಷಗಳು ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಪರಿಣಾಮ ರಾಜ್ಯದ ಹಲವೆಡೆ ಅಲ್ಲಲ್ಲಿ ರಸ್ತೆ ತಡೆ ಮಾಡಿದ ವರದಿ ಬಂದಿದೆ.

ಬಿಜೆಪಿ ಮುಖಂಡರು ಹುಬ್ಬಳ್ಳಿಯಲ್ಲಿ ಎತ್ತಿನ ಬಂಡಿಯ ಮೂಲಕ ಸಾಗಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರಕಾರದ ವಿರುದ್ಧ ಘೋಷಣೆಯನ್ನು ಕೂಗಿದ ಕಾರ್ಯಕರ್ತರು ಪೆಟ್ರೋಲಿಯಂ ಸಚಿವ ಮುರಳಿ ದೆವೋರಾ ಅವರ ಪ್ರತಿಕೃತಿಯನ್ನು ದಹಿಸಿದರು. ಕೇಂದ್ರ ಸರಕಾರ ಮಾಡಿರುವ ತೈಲ ಬೆಲೆ ಏರಿಕೆಯನ್ನು ವಾಪಾಸು ಪಡೆಯದಿದ್ದರೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.

ಹಾಸನದ ಹೇಮಾವತಿ ವೃತ್ತದ ಬಳಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೈಲ ಬೆಲೆ ಅಧಿಕಗೊಂಡಿರುವುದರಿಂದ ಸರಕಾರ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರಕಾರದ ಈ ನಿರ್ಧಾರವನ್ನು ಖಂಡಿಸಿದ ಎಡಪಕ್ಷಗಳು ಹಾಗೂ ಬಿಜೆಪಿ ಅಲ್ಲಲ್ಲಿ ರಸ್ತೆ ತಡೆ ನಡೆಸಿದ್ದು ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ.
ಮತ್ತಷ್ಟು
ರಾಜ್ಯಪಾಲರಿಂದ ಸಂಸದರ ಸಭೆ
ಆಸಿಫ್‌ಗೆ ಜಾಮೀನು ನೀಡದಂತೆ ಸಿಓಡಿ ಮನವಿ
ಪ್ರತಿಭಟನೆ ನೆಪದಲ್ಲಿ ಪುಂಟಾಟಿಕೆ ನಡೆಸಿದಲ್ಲಿ ಉಗ್ರಕ್ರಮ
ನಿಪ್ಪಾಣಿಯಲ್ಲಿ ಬಾಂಬ್ ತಯಾರಿಕೆಗಿಳಿದಿದ್ದ ಉಗ್ರರು
ಬಿಜೆಪಿಯಿಂದ ಜನಾದೇಶಕ್ಕೋಸ್ಕರ ಜನಾಕ್ರೋಶ
ಪಶ್ಚಿಮ ಘಟ್ಟದಲ್ಲಿ ಸಿಮಿ ಉಗ್ರರ ನಿಯಮಿತ ಸಭೆ!