ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೊಲೀಸ್ ಠಾಣೆ ಏರಿದ ಗಣೇಶನ ಮದುವೆ
News RoomNRB
ಪಡ್ಡೆ ಹುಡುಗಿಯರ ಹೃದಯಕ್ಕೆ ಕಿಚ್ಚಿಟ್ಟು ರಾತೋರಾತ್ರಿ ತರಾತುರಿಯಲ್ಲಿ ನಡೆದ ಗೋಲ್ಡನ್ ಸ್ಟಾರ್ ಗಣೇಶನ ಮದುವೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಮತ್ತೊಂದು ತಿರುವು ಪಡೆದುಕೊಂಡಿದೆ.

"ಹಿಂದೆ ಮದುವೆಯಾಗಿದ್ದು ವಿಚ್ಛೇದನ ಪಡೆಯದ ಹುಡುಗಿಯನ್ನು ಗಣೇಶ್ ಮದುವೆಯಾಗಿದ್ದು ಇದು ಹಿಂದೂಧರ್ಮದ ಆಚರಣೆಗಳಿಗೆ ವಿರುದ್ಧವಾಗಿದೆ" ಎಂದು ಆರೋಪಿಸಿ ಅಖಿಲ ಕರ್ನಾಟಕ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಚಿ.ನಾ.ರಾಮು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಮಾರ್ಗವನ್ನನುಸರಿಸುವ ಮೂಲಕ ಗಣೇಶ್ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಮು ತನ್ನ ದೂರಿನಲ್ಲಿ ಕೇಳಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆಗಾಗಿ ಎಸಿಪಿ ಡಾ| ನಾರಾಯಣ ಸ್ವಾಮಿಯವರನ್ನು ಸಂಪರ್ಕಿಸಿದಾಗ, ಇದಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿಲ್ಲ. ಆದರೆ ದೂರು ಸ್ವೀಕರಿಸಿದ್ದು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಗೋಲ್ಡನ್ ಸ್ಟಾರ್ ಗಣೇಶ್ ಪ್ರತಿಕ್ರಿಯೆಗೆ ಸಿಗುತ್ತಿಲ್ಲ.

ಗಡಿಬಿಡಿಯ ವಿವಾಹ
ಗಣೇಶ್ ಅವರು ಮೊನ್ನೆ ಸೋಮವಾರ ರಾತ್ರಿ ನಡೆದ ತರಾತುರಿ ಸಮಾರಂಭದಲ್ಲಿ ಕರಾವಳಿ ಹುಡುಗಿ ಶಿಲ್ಪಾರನ್ನು ಬಾಳ ಸಂಗಾತಿಯನ್ನಾಗಿಸಿಕೊಂಡರು. ಈ ಮೊದಲು ಫೆಬ್ರವರಿ 18ಕ್ಕೆ ಮದುವೆ ದಿನಾಂಕ ನಿಗದಿ ಮಾಡಲಾಗಿತ್ತು.

ಆದರೆ ಗಣೇಶ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅನೇಕ ಹುಡುಗಿಯರು ದೂರವಾಣಿ ಕರೆಗಳು ಮಹಾಪೂರವಾಗಿ ಹರಿದು ಬಂತು. ಕೆಲವರಂತೂ 'ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂಬ ಬೆದರಿಕೆಯನ್ನೂ ಹಾಕಿದ್ದರಂತೆ. ಇನ್ನೂ ಕಾದರೆ ಇನ್ನಷ್ಟು ತೊಂದರೆ ಎಂಬ ಹಿನ್ನೆಲೆಯಲ್ಲಿ ದಿಢೀರ್ ಮದುವೆಯ ನಿರ್ಧಾರ ಕೈಗೊಳ್ಳಲಾಯಿತು ಎಂಬುದಾಗಿ ಗಣೇಶ್ ಹೇಳಿದ್ದರು.

ಗಣೇಶ್ ಅವರು ವಿವಾಹವಾಗಿರುವ ಹುಡುಗಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಬಾರ್ಕೂರಿನ ಶಿಲ್ಪಾ ಅವರಿಗೆ ಈ ಹಿಂದೆ ಮೈಸೂರಿನ ಪ್ರತಿಷ್ಠಿತ ರೆಸಾರ್ಟ್ ಒಂದರ ಮಾಲೀಕ ವಿಕ್ರಮ್ ಜತೆ ವಿವಾಹವಾಗಿತ್ತು. ಒಂದು ಮಗುವೂ ಜನಿಸಿತ್ತು. ಆದರೆ ಮೂರು ವರ್ಷಗಳಲ್ಲಿ ಅವರು ದಾಂಪತ್ಯ ಮುರಿದು ಬಿತ್ತೆಂಬ ಸುದ್ದಿಗಳು ಗಣೇಶ್ ವಿವಾಹದ ವೇಳೆ ಹಬ್ಬಿದ್ದವು.
ಮತ್ತಷ್ಟು
ಇಂಧನ ಬೆಲೆ ಏರಿಕೆ ಪ್ರತಿಭಟನೆ; ಅಲ್ಲಲ್ಲಿ ರಸ್ತೆತಡೆ
ರಾಜ್ಯಪಾಲರಿಂದ ಸಂಸದರ ಸಭೆ
ಆಸಿಫ್‌ಗೆ ಜಾಮೀನು ನೀಡದಂತೆ ಸಿಓಡಿ ಮನವಿ
ಪ್ರತಿಭಟನೆ ನೆಪದಲ್ಲಿ ಪುಂಟಾಟಿಕೆ ನಡೆಸಿದಲ್ಲಿ ಉಗ್ರಕ್ರಮ
ನಿಪ್ಪಾಣಿಯಲ್ಲಿ ಬಾಂಬ್ ತಯಾರಿಕೆಗಿಳಿದಿದ್ದ ಉಗ್ರರು
ಬಿಜೆಪಿಯಿಂದ ಜನಾದೇಶಕ್ಕೋಸ್ಕರ ಜನಾಕ್ರೋಶ