ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರ್ಚ್ ಅಂತ್ಯಕ್ಕೆ ಬೆಂ-ರಾಮನಗರ ರೈಲು ಮಾರ್ಗ ಸಿದ್ಧ
ಬೆಂಗಳೂರು-ರಾಮನಗರ ಜೋಡಿ ರೈಲು ಮಾರ್ಗ ಮಾರ್ಚ್ ಕೊನೆಯಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿರುವ ರೈಲ್ವೆ ಇಲಾಖೆ ಈ ಜೋಡಿ ಮಾರ್ಗ ಮೈಸೂರಿಗೆ ವಿಸ್ತರಣೆಗೊಳ್ಳಲು ಇನ್ನು ಮೂರು ವರ್ಷ ಬೇಕಾಗಬಹುದು ಎಂದು ಹೇಳಿದೆ.

ರಾಮನಗರ-ಮೈಸೂರು ಮಾರ್ಗಕ್ಕೆ ಈ ವರ್ಷವಷ್ಟೇ ಆಡಳಿತಾತ್ಮಕ ಅನುಮತಿ ದೊರೆತಿದ್ದು, ಕೆಲಸ ಆರಂಭಗೊಂಡಿದೆ. ಆದರೆ ಮೂರು ದೊಡ್ಡ ಸೇತುವೆಗಳು ನಿರ್ಮಾಣವಾಗಬೇಕಿರುವುದರಿಂದ 2011ರ ಮಾರ್ಚ್ ಅಂತ್ಯದೊಳಗೆ ಮಾರ್ಗ ಸಿದ್ಧಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಈ ಮಧ್ಯೆ, ಜನರಿಗೆ ಅನುಕೂಲವಾಗುವಂತೆ ಸೀಟು ಕಾದಿರಿಸುವಿಕೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅಂಚೆ ಇಲಾಖೆಯೊಂದಿಗೆ ರೈಲ್ವೆ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು, ಇನ್ನೊಂದು ವಾರದಲ್ಲಿ ಹುಬ್ಬಳ್ಳಿ ಅಂಚೆ ಕಚೇರಿಯಲ್ಲಿ ಈ ಸೌಲಭ್ಯ ದೊರೆಯಲಿದೆ ಎಂದು ಮೂಲಗಳು ಹೇಳಿವೆ.

ಅಲ್ಲದೆ, ಮೈಸೂರು-ಚಾಮರಾಜನಗರ ಹಳಿ ಪರಿವರ್ತನೆ ಕಾರ್ಯ ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಈ ಮಾರ್ಗದಲ್ಲಿ ನೇರ ರೈಲು ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ಕ್ಷೇತ್ರ ಪುನರ್ವಿಂಗಡಣೆಗೆ ಮಿಶ್ರಾಭಿಪ್ರಾಯ
ಪೊಲೀಸ್ ಠಾಣೆ ಏರಿದ ಗಣೇಶನ ಮದುವೆ
ಇಂಧನ ಬೆಲೆ ಏರಿಕೆ ಪ್ರತಿಭಟನೆ; ಅಲ್ಲಲ್ಲಿ ರಸ್ತೆತಡೆ
ರಾಜ್ಯಪಾಲರಿಂದ ಸಂಸದರ ಸಭೆ
ಆಸಿಫ್‌ಗೆ ಜಾಮೀನು ನೀಡದಂತೆ ಸಿಓಡಿ ಮನವಿ
ಪ್ರತಿಭಟನೆ ನೆಪದಲ್ಲಿ ಪುಂಟಾಟಿಕೆ ನಡೆಸಿದಲ್ಲಿ ಉಗ್ರಕ್ರಮ