ರವಿವಾರ ದಿ 17ರಂದು ನಡೆಯಲಿರುವ ಡೆಸ್ಟಿನೆಷನ್ ನಾಸಾ ಸ್ಪರ್ಧೆಯ ಅಂತಿಮ ಸುತ್ತಿಗೆ 16 ನಗರ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಡೆಸ್ಟಿನೇಷನ್ ನಾಸಾದ ಅಂತಿಮ ಸುತ್ತಿನ ಸ್ಪರ್ಧೆಗಳು ಅಂತರ್ಜಾಲ ಮೂಲಕ ನಡೆಯಲಿವೆ.
ಅಂತಿಮ ಸುತ್ತು ಪ್ರವೇಶಿಸಿರುವ 130 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಮಾತ್ರ ತಮ್ಮ ಓರ್ವ ಪೋಷಕ ಮತ್ತು ಓರ್ವ ಗುರುಗಳೊಂದಿಗೆ ನಾಸಾಗೆ ಭೇಟಿ ನೀಡಬಹುದು. ಅಂತಿಮ ಸುತ್ತಿನಲ್ಲಿ ವಿಫಲವಾದ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆಯಲಿದ್ದಾರೆ. ಅಂತಿಮ ಸುತ್ತಿನಲ್ಲಿ ಜಯಗಳಿಸಿದ 10 ವಿದ್ಯಾರ್ಥಿಗಳು ಮೇ 8ರಂದು ನಾಸಾಗೆ ತೆರಳುವ ಸಾಧ್ಯತೆ ಇದೆ ಎಂದು ಡೆಸ್ಟಿನೇಷನ್ ನಾಸಾ ಸ್ಪರ್ದೆಯನ್ನು ಆಯೋಜಿಸಿರುವ 24X7ಗುರು.ಕಾಮ್ ಪ್ರಕಟಣೆಯಲ್ಲಿ ಹೇಳಿದೆ.
24X7ಗುರು.ಕಾಮ್ ಮತ್ತು ರೇಡಿಯೋ ಮಿರ್ಚಿ ಇವುಗಳ ಜಂಟಿ ಸಹಯೋಗದಲ್ಲಿ ನವ್ಹಂಬರ್ 28. 2007 ರಿಂದ ದೇಶದ ಪ್ರಮುಖ 13 ನಗರಗಳಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಗೆ. ಎರಡು ಹಂತಗಳಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆದಿದ್ದವು. ಅರ್ಹತಾ ಸುತ್ತಿನಲ್ಲಿ 49 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಗುವಿನ ಶೈಕ್ಷಣಿಕ ಜೀವನದ ಕುರಿತು ಇರುವ ತಾರೇ ಜಮೀನ್ ಪರ್ ಚಿತ್ರದ ನಟ, ನಿರ್ದೇಶಕ ಅಮೀರ್ ಖಾನ್ ಈ ಡೇಸ್ಟಿನೇಷನ್ ನಾಸಾ ಸ್ಪರ್ಧೆಗೆ ಚಾಲನೆ ನೀಡಿದ್ದರು.
24X7ಗುರು.ಕಾಮ್‌ನ ನಿರ್ದೇಶಕ ಸಂಜೀವ್ ಗುಪ್ತಾ ಅವರು, ಡೆಸ್ಟಿನೇಷನ್ ನಾಸಾ ಸ್ಪರ್ಧೆಗೆ ಬಂದಿರುವ ಪ್ರತಿಕ್ರಿಯೆಯನ್ನು ನಿರೀಕ್ಷೆಗೂ ಮೀರಿ ಇದೆ ಎಂದು ಹೇಳಿದ ಅವರು ಭವಿಷ್ಯದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಗುರುಗಳಿಗಾಗಿ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದೆವೆ ಎಂದು ನುಡಿದರು. ಸ್ಪರ್ಧೆಯ ವಿಶೇಷತೆ ಕುರಿತು ಮಾತನಾಡಿದ ಅವರು ಹಲವಾರು ಸಂದರ್ಭಗಳಲ್ಲಿ ವಿದ್ಯಾರ್ಥಿಯ ಭವಿಷ್ಯಕ್ಕೆ ಬುನಾದಿ ಹಾಕಿದ ಗುರುವನ್ನೇ ಮರೆಯುತ್ತೆವೆ. ಭವಿಷ್ಯದ ನಾಗರಿಕರನ್ನು ನಿರ್ಮಿಸುವ ಗುರುವಿನ ಕಾಯಕವನ್ನು ನಾವು ಗುರುತಿಸುವುದೇ ಇಲ್ಲ. ಗುರುವನ್ನು ಸೂಕ್ತ ರೀತಿಯಲ್ಲಿ ಸತ್ಕರಿಸಿ ಗೌರವಿಸುವ ನಿಟ್ಟಿನಲ್ಲಿ ಡೆಸ್ಟಿನೇಷನ್ ನಾಸಾ ಸ್ಪರ್ಧೆಯಲ್ಲಿ ಜಯಗಳಿಸುವ ವಿದ್ಯಾರ್ಥಿಯೊಂದಿಗೆ ಗುರುಗಳು ನಾಸಾಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು
|