ಕೆಎಸ್ಆರ್ಟಿಸಿ ಬಸ್ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಜಾಪುರದಿಂದ ವರದಿಯಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನಾಗಿರುವ ಭಗವಂತ ಭೀಮರಾಯ್ ಗಾಯಕವಾಡ್, ಶುಕ್ರವಾರ ರಾತ್ರಿ 12 ಗಂಟೆಯ ಸುಮಾರಿಗೆ ಕರ್ತವ್ಯ ಮುಗಿಸಿಕೊಂಡು ಬಂದ ನಂತರ ಬಸ್ ಡಿಪೋದಲ್ಲಿಯೇ ನೇಣುಹಾಕಿಕೊಂಡಿದ್ದಾಗಿ ಆತನ ಸಹೋದ್ಯೋಗಿಗಳು ತಿಳಿಸಿದ್ದಾರೆ.
ಈತನ ಸಹೋದ್ಯೋಗಿಗಳು ಹೇಳುವ ಪ್ರಕಾರ ಕಳೆದ 25 ವರ್ಷಗಳಿಂದ ಈ ವೃತ್ತಿಯಲ್ಲಿದ್ದ ಗಾಯಕವಾಡ್‌ರಿಗೆ ಆತನ ಮೇಲಧಿಕಾರಿಗಳು ಬಹಳ ದಿನಗಳಿಂದಲೂ ಕಿರುಕುಳ ನೀಡುತ್ತಿದ್ದರು. ನಿನ್ನೆ ರಾತ್ರಿ ಪ್ರಾಯಶಃ ಇದು ಅತಿರೇಕಕ್ಕೆ ಹೋಗಿ ನೇಣುಹಾಕಿಕೊಳ್ಳುವಂತೆ ಪ್ರೇರೇಪಿಸಿರಬೇಕು ಎಂಬುದಾಗಿ ಹೇಳಿದ್ದಾರೆ.
ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ. ಮೃತನ ಸಂಬಂಧಿಕರು-ಕುಟುಂಬದ ಬಗೆಗಿನ ಯಾವುದೇ ವಿವರಗಳು ಇನ್ನೂ ಲಭ್ಯವಾಗಿಲ್ಲ. ಆತ್ಮಹತ್ಯೆಗೆ ಇತರ ಯೂವುದೇ ಕಾರಣಗಳಿದ್ದವೇ ಎಂಬುದೂ ತಿಳಿದುಬಂದಿಲ್ಲ.
|