ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಳೆ ವಿದ್ಯಾರ್ಥಿಗಳಿಗೆ ಬ್ಯಾಂಕ್ ರಸಪ್ರಶ್ನೆ
ವಿಜಯಾ ಬ್ಯಾಂಕ್ ವತಿಯಿಂದ ಭಾನುವಾರ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಮಹಾತ್ಮಾಗಾಂಧಿ ರಸ್ತೆಯ ಟ್ರಿನಿಟಿ ವೃತ್ತದ ಬಳಿಯಿರುವ ಬ್ಯಾಂಕ್ ಪ್ರಧಾನ ಕಚೇರಿಯ ಮುಲ್ಕಿ ಸುಂದರಂ ಶೆಟ್ಟಿ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ರಾಜ್ಯದ ಅನೇಕ ಪ್ರೌಢಶಾಲೆಗಳ ಮಕ್ಕಳು ಇದರಲ್ಲಿ ಭಾಗವಹಿಸುತ್ತಿದ್ದು, ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಸ್ಪರ್ಧೆಯ ಕೊನೆಯ ಸುತ್ತಿಗೆ ಅರ್ಹವಾಗುವ ಐದು ತಂಡಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಮಕ್ಕಳಲ್ಲಿ ಸ್ಪರ್ಧಾ ಮನೋಭಾವವನ್ನು ಉದ್ದೀಪಿಸುವ ಹಾಗೂ ಬೆಳೆಸುವ ಈ ಸ್ಪರ್ಧೆ ದಿನದಿಂದ ದಿನಕ್ಕೆ ಜನಪ್ರಿಯವಾಗಿದ್ದು ಇದನ್ನು ಹೆಚ್ಚು ಜನರಿಗೆ ತಲುಪಿಸುವ ಕುರಿತಾದ ಯೋಜನೆಗಳನ್ನು ವಿಜಯಾ ಬ್ಯಾಂಕ್ ಹಮ್ಮಿಕೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ವಿಜಯಾ ಬ್ಯಾಂಕ್ ಕ್ವಿಜ್ ಎಂದೇ ಹೆಸರುವಾಸಿಯಾಗಿದ್ದ ಈ ಸ್ಪರ್ಧೆಗೆ 'ವಿಜಯಾ ಬ್ಯಾಂಕ್ ಜೆನ್ ಯೂಥ್ ಕ್ವಿಜ್' ಎಂದು ಇತ್ತೀಚೆಗಷ್ಟೇ ಮರುನಾಮಕರಣ ಮಾಡಲಾಗಿದ್ದು ಗಿರಿ ಬಾಲಸುಬ್ರಹ್ಮಣ್ಯಂ ಈ ಸ್ಪರ್ಧೆಯ ನಿರ್ವಹಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮತ್ತಷ್ಟು
ಕೃಷ್ಣಾಗಮನ ಸುದ್ದಿಗೆ ಮತ್ತೆ ಚಾಲನೆ
ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆ
ಕೊಡಗಿನಲ್ಲಿ ಭೀಕರ ಅಪಘಾತ; 5 ಸಾವು
ದಿ. 17ರಂದು "ಡೆಸ್ಟಿನೆಷನ್ ನಾಸಾ" ಅಂತಿಮ ಸ್ಪರ್ಧೆ
ಮಾರ್ಚ್ ಅಂತ್ಯಕ್ಕೆ ಬೆಂ-ರಾಮನಗರ ರೈಲು ಮಾರ್ಗ ಸಿದ್ಧ
ಕ್ಷೇತ್ರ ಪುನರ್ವಿಂಗಡಣೆಗೆ ಮಿಶ್ರಾಭಿಪ್ರಾಯ