ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕಲಿ ಔಷಧಿ ಜಾಲ ಬಯಲಿಗೆ
ನಕಲಿ ಔಷಧಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸಿರುವ ನಗರದ ಸಿಸಿಬಿ ಪೊಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಗೆ ಸೇರಿದ ಶ್ರೀನಿವಾಸ ರೆಡ್ಡಿ ಮತ್ತು ಆತನ ಇಬ್ಬರು ಸಹಚರರನ್ನು ಸಿಸಿಬಿ ಪೊಲೀಸರು ಈಗ ಬಂಧಿಸಿದ್ದು ಅವರಿಂದ ಸುಮಾರು 3 ಲಕ್ಷ ಮೌಲ್ಯದ ಔಷಧಿಯನ್ನು ವಶಪಡಿಸಿಕೊಂಡಿದ್ದಾರೆ. ಈ ದುರುಳರು ಆಸ್ತಮಾ ಸೇರಿದಂತೆ ಹಲವು ಕಾಯಿಲೆಗಳ ನಕಲಿ ಔಷಧವನ್ನು ಮಾರುತ್ತಿದ್ದರು.

ತಮಗೆ ಸಿಕ್ಕ ಖಚಿತ ಮಾಹಿತಿಯ ಅನುಸಾರ ಪೊಲೀಸರು ಈ ಮಿಂಚಿನ ಕಾರ್ಯಾಚರಣೆಯನ್ನು ಕೈಗೊಂಡಿದ್ದು ಕಳೆದ 5-6 ವರ್ಷಗಳಿಂದಲೂ ಈ ಜಾಲ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿತ್ತು ಎಂಬ ಆಘಾತಕಾರಿ ಅಂಶ ಪ್ರಥಮ ಹಂತದ ವಿಚಾರಣೆಯಲ್ಲಿ ಹೊರಬಿದ್ದಿದೆ.

ತಮ್ಮ ಔಷಧಿಗಳ ಕುರಿತು ಯಾರಲ್ಲೂ ಅನುಮಾನ ಬರದಿರಲಿ ಎಂಬ ದೃಷ್ಟಿಯಿಂದ ವಂಚಕರು ನಗರದಲ್ಲಿ ಕೆಲವೊಂದು ಔಷಧ ವಿತರಕರನ್ನು, ಮಾರಾಟ ಪ್ರತಿನಿಧಿಗಳನ್ನು ನೇಮಿಸಿಕೊಂಡಿದ್ದರು. ಔಷಧಿ ಬಾಟಲಿಯ ಮೇಲೆ ಅದು ಒಳಗೊಂಡಿರುವ ಸಂಬಂಧಪಟ್ಟ ಔಷಧ ಘಟಕಗಳ ವಿವರವಾದ ಲೇಬಲ್ ಇರುತ್ತಿತ್ತಾದ್ದರಿಂದ ಯಾರಿಗೂ ಮೇಲುನೋಟಕ್ಕೆ ಅನುಮಾನ ಬರುತ್ತಿರಲಿಲ್ಲ. ಆದರೆ ಔಷಧಿ ಖರೀದಿಸಿದ ನಂತರ ರೋಗಿಗಳ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರುತ್ತಿರಲಿಲ್ಲ, ಬದಲಿಗೆ ಕಾಯಿಲೆ ಹೆಚ್ಚಾಗುತ್ತಿತ್ತು ಎಂದು ತಿಳಿದುಬಂದಿದೆ.

ಸಿಸಿಬಿ ಪೊಲೀಸರು ಈ ಕುರಿತು ಹೆಚ್ಚಿನ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.
ಮತ್ತಷ್ಟು
ನಾಳೆ ವಿದ್ಯಾರ್ಥಿಗಳಿಗೆ ಬ್ಯಾಂಕ್ ರಸಪ್ರಶ್ನೆ
ಕೃಷ್ಣಾಗಮನ ಸುದ್ದಿಗೆ ಮತ್ತೆ ಚಾಲನೆ
ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆ
ಕೊಡಗಿನಲ್ಲಿ ಭೀಕರ ಅಪಘಾತ; 5 ಸಾವು
ದಿ. 17ರಂದು "ಡೆಸ್ಟಿನೆಷನ್ ನಾಸಾ" ಅಂತಿಮ ಸ್ಪರ್ಧೆ
ಮಾರ್ಚ್ ಅಂತ್ಯಕ್ಕೆ ಬೆಂ-ರಾಮನಗರ ರೈಲು ಮಾರ್ಗ ಸಿದ್ಧ