ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಂಭತ್ತು ಕೊಲೆ ಪಾತಕಿಗಳ ಸೆರೆ
ಕಾಫಿ ಬೀಜ ಹೇರಿದ್ದ ಲಾರಿಯ ಚಾಲಕ ಹಾಗೂ ಕ್ಲೀನರ್‌ನನ್ನು ಕೊಂದು ಸುಟ್ಟು ಹಾಕಿ, ಕಾಫಿ ಬೀಜವನ್ನು ಲೂಟಿ ಮಾಡಿದ್ದ ಒಂಭತ್ತು ಮಂದಿಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕಾಫೀ ಡೇಗೆ ಹಾಸನದಿಂದ ಕಾಫೀ ಬೀಜದ ಲೋಡ್ ಸಾಗಿಸುತ್ತಿದ್ದ ಲಾರಿ ಚಾಲಕ ಸೈಯದ್ ಫಾರೂಕ್ ಮತ್ತು ಕ್ಲೀನರ್ ರಮೇಶ್ ಸಾವಿಗೆ ಈ ಒಂಭತ್ತು ಮಂದಿಯೇ ಕಾರಣ ಎಂಬ ಅಂಶವೀಗ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆಗೆ ಸೇರಿದ ಶ್ರೀನಾಥ್, ಸಂತೋಷ್, ಸೋಮಶೇಖರ್, ಅಜಯ್, ರಾಘವೇಂದ್ರ, ಗೀರೀಶ್, ಮಹೇಶ್, ದೇವರಾಜೇಗೌಡ, ಅರವಿಂದ ಬಂಧನಕ್ಕೀಡಾದ ಆರೋಪಿಗಳು ಎಂದು ಪಶ್ಚಿಮ ವಿಭಾಗದ ಡಿಸಿಪಿ ಪಿ.ಹರಿಶೇಖರನ್ ತಿಳಿಸಿದ್ದಾರೆ.

ಕಲಾಸಿಪಾಳ್ಯ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ ಟ್ರಾನ್ಸ್ಪೋರ್ಟ್ ಎಕ್ಸ್‌ಟೆನ್ಷನ್ನಲ್ಲಿ ರಾತ್ರಿ ವೇಳೆಯಲ್ಲಿ ಕೆಲವರು ಲಾರಿ ದೋಚಿಕೊಂಡು ಹೋಗುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಅನುಸರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದಾಗ ಈ 9 ಮಂದಿ ಸಿಕ್ಕಿಬಿದ್ದರು ಎಂದು ತಿಳಿದುಬಂದಿದೆ.
ಮತ್ತಷ್ಟು
ಜನಪ್ರಿಯವಾಗುತ್ತಿರುವ ರಾಜ್ಯಪಾಲರ ಜನತಾದರ್ಶನ
ನಕಲಿ ಔಷಧಿ ಜಾಲ ಬಯಲಿಗೆ
ನಾಳೆ ವಿದ್ಯಾರ್ಥಿಗಳಿಗೆ ಬ್ಯಾಂಕ್ ರಸಪ್ರಶ್ನೆ
ಕೃಷ್ಣಾಗಮನ ಸುದ್ದಿಗೆ ಮತ್ತೆ ಚಾಲನೆ
ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆ
ಕೊಡಗಿನಲ್ಲಿ ಭೀಕರ ಅಪಘಾತ; 5 ಸಾವು