ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ರಾಜಿನಾಮೆ ನೀಡಿ ರಾಜಕಾರಣಕ್ಕೆ ಮರಳುವ ಕ್ಷಣಗಣನೆ ಆರಂಭವಾಗಿರುವಂತಿದೆ.
ಕೇಂದ್ರ ಸಚಿವರಾಗಿ ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯ ವಹಿಸಿಕೊಳ್ಳುವ ಇಲ್ಲವೇ, ಸಮನ್ವಯ ಸಮಿತಿಯ ಅಧ್ಯಕ್ಷರಾಗುವ ಸಾಧ್ಯತೆಗಳು ಎಸ್. ಕೃಷ್ಣ ಅವರಿಗಿವೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್ ನಿರ್ಧರಿಸಿದ್ದು, ಇನ್ನೊಂದು ವಾರದೊಳಗೆ ಎಸ್. ಎಂ. ಕೃಷ್ಣ ರಾಜಕೀಯಕ್ಕೆ ಮರಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪ್ರಸ್ತುತ ರಾಜ್ಯದ ಉಸ್ತುವಾರಿಯನ್ನು ಪೃಥ್ವಿರಾಜ್‌ಚೌವಾಣ್ ನೋಡಿಕೊಳ್ಳುತ್ತಿದ್ದಾರೆ. ಎಸ್. ಎಂ.ಕೃಷ್ಣ ರಾಜ್ಯದ ಉಸ್ತುವಾರಿ ನೋಡಿಕೊಳ್ಳುವ ಮೂಲಕ ರಾಜ್ಯ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬುದು ಕಾಂಗ್ರೆಸ್ ಪಕ್ಷದ ಆಕಾಂಕ್ಷೆಯಾಗಿದ್ದರಿಂದ ಕೃಷ್ಣರವರ ರಾಜಕೀಯ ಪ್ರವೇಶವನ್ನು ರಾಜ್ಯ ಕಾಂಗ್ರೆಸ್ ಪಕ್ಷ ಕಾತರದಿಂದ ಕಾಯುತ್ತಿದೆ.
|