ಕಳೆದ ಕೆಲವು ಶತಮಾನಗಳಿಂದಲೇ ಬಾಲ್ಯ ವಿವಾಹ ಪದ್ಧತಿಯನ್ನು ವಿರೋಧಿಸುತ್ತ ಬಂದಿದ್ದರೂ ರಾಜ್ಯದಲ್ಲಿ ಇದು ಇನ್ನೂ ಜೀವಂತವಿದೆ.
ಆತನಿಗೆ 6ವರ್ಷ ವಯಸ್ಸು. ಆಕೆಗೆ 11ತಿಂಗಳ ಕೂಸು. ಇವರಿಬ್ಬರನ್ನು ಹಸೆಮಣೆಗೆ ತಂದು ಕೂರಿಸಿದ್ದು, ಅವರಿಬ್ಬರ ಪೋಷಕರು. ಈ ಮದುವೆಗೆ ಸಾಕ್ಷಿಯಾಗಿದ್ದು ಜಿಲ್ಲೆಯ ಐತಿಹಾಸಿಕ ಮಹಾಕೂಟ ಶಿವನ ದೇವಾಲಯ.
ಬಾಗಲಕೋಟೆಯ ಶಿವನ ದೇವಾಲಯದಲ್ಲಿ ನಡೆದ ಈ ಬಾಲ್ಯ ವಿವಾಹಕ್ಕೆ ನೂರಾರು ಮಂದಿ ಸಾಕ್ಷಿಯಾದರು. ಇದನ್ನು ಯಾರೂ ಕೂಡ ವಿರೋಧಿಸಲಿಲ್ಲ. ಬಾಲ್ಯ ವಿವಾಹಗಳ ವಿರುದ್ಧ ಹಲವು ಕಾನೂನುಗಳನ್ನು ಹೊರತಂದಿದ್ದರೂ ಇನ್ನು ಅಲ್ಲಲ್ಲಿ ಬಾಲ್ಯ ವಿವಾಹಗಳು ಜೀವಂತವಾಗಿರುವುದು ವಿಷಾದದ ಸಂಗತಿಯಾಗಿದೆ.
ಈ ಮದುವೆಯ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ವಿಷಯ ಬೆಳಕಿಗೆ ಬರುತ್ತಲೇ ಜಿಲ್ಲಾಧಿಕಾರಿ ಜಿ.ಎನ್. ನಾಯಕ್ ಪೋಷಕರ ವಿರುದ್ಧ ತನಿಖೆಗೆ ಆದೇಶ ನೀಡಿದ್ದಾರೆ. ಒಟ್ಟಿನಲ್ಲಿ ಈ ಬಗ್ಗೆ ಇನ್ನಾದರೂ ಸಾರ್ವಜನಿಕರು ಹಾಗೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಿದೆ.
|