ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನೂ ಮೂವರು ಉಗ್ರರು ಸಿಓಡಿ ಬಲೆಗೆ
ಚುರುಕುಗೊಂಡ ಕಾರ್ಯಾಚರಣೆ
ದಾವಣಗೆರೆಯಲ್ಲಿ ಇತ್ತೀಚೆಗೆ ಬಂಧಿನಕ್ಕೀಡಾಗಿರುವ ಶಂಕಿತ ಉಗ್ರರ ಜೊತೆ ಸಂಪರ್ಕವಿತ್ತೆನ್ನಲಾಗಿರುವ ಮತ್ತೆ ಮೂವರನ್ನು ಸಿಓಡಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಬಂಧಿತ ಉಗ್ರರ ವಿಚಾರಣೆಯಲ್ಲಿ ದೊರೆತ ಮಾಹಿತಿ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ಮೂವರನ್ನು ಸಿಓಡಿ ಪೊಲೀಸರು ಬಂಧಿಸಿದ್ದು, ರಹಸ್ಯ ಸ್ಥಳವೊಂದರಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಇವರಿಂದ ಪೊಲೀಸರಿಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗಿದ್ದು, ಉಗ್ರರ ಜೊತೆ ಸಂಪರ್ಕವಿರುವುದಾಗಿ ಒಪ್ಪಿಕೊಂಡಿದ್ದಾರೆನ್ನಲಾಗಿದೆ.

ಅಲ್ಲದೆ, ಈ ಮೂವರು ಸಂಭವನೀಯ ದಾಳಿಗಳ ಯೋಜನೆಯ ಕುರಿತು ಕೆಲ ಮಾಹಿತಿಗಳನ್ನು ನೀಡಿದ್ದು, ಅದರ ಆಧಾರದಲ್ಲಿ ಸಿಓಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈ ಮಧ್ಯೆ ಶಂಕಿತ ಉಗ್ರನಾದ ಆಸಿಫ್‌ನ ಪೋಷಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಮಗ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಲ್ಲ. ಆತ ಒಬ್ಬ ಬುದ್ಧಿವಂತ ಹುಡುಗನಾಗಿದ್ದಾನೆ. ಅಲ್ಲಿ ಇಲ್ಲಿ ಸಾಲ ಮಾಡಿ ಆತನನ್ನು ತಾನು ಓದಿಸಿರುವುದಾಗಿ ಹೇಳಿದ್ದಾರೆ.
ಮತ್ತಷ್ಟು
ರಾಜ್ಯದಲ್ಲಿ ಬಾಲ್ಯವಿವಾಹ ಇನ್ನೂ ಜೀವಂತ
ಉಗ್ರರ ವಿಚಾರಣೆ ಸಿಬಿಐಗೊಪ್ಪಿಸಲು ಬಿಜೆಪಿ ಒತ್ತಾಯ
ಎಸ್.ಎಂ. ಕೃಷ್ಣ ಕೇಂದ್ರ ಸಂಪುಟಕ್ಕೆ?
ಒಂಭತ್ತು ಕೊಲೆ ಪಾತಕಿಗಳ ಸೆರೆ
ಜನಪ್ರಿಯವಾಗುತ್ತಿರುವ ರಾಜ್ಯಪಾಲರ ಜನತಾದರ್ಶನ
ನಕಲಿ ಔಷಧಿ ಜಾಲ ಬಯಲಿಗೆ