ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನಲ್ಲಿ 26 ಅಡಿ ಎತ್ತರದ ಶಿವನ ವಿಗ್ರಹ
NRB
ಬೆಂಗಳೂರಿನಲ್ಲಿ ಎರಡನೇ ಅತಿದೊಡ್ಡ ಶಿವನ ವಿಗ್ರಹದ ಭಾನುವಾರ ಪ್ರತಿಷ್ಠಾಪನೆಗೊಂಡಿದೆ. ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಇದೊಂದು ಹೊಸ ಸೇರ್ಪಡೆಯಾಗಿದೆ. ಈ ಭವ್ಯ-ದಿವ್ಯ ಮೂರ್ತಿ 26 ಅಡಿ ಎತ್ತರವಿದ್ದು ಇದರ ನಿರ್ಮಾಣಕ್ಕೆಂದೇ ಕಳೆದ ಆರು ತಿಂಗಳಿಂದ ಎಡೆಬಿಡದಂತೆ ಕಾರ್ಯಚಟುವಟಿಕೆಯನ್ನು ನಡೆಸಲಾಗಿತ್ತು.

ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲುವಿನ ಪ್ರಕೃತಿ ಸೌಂದರ್ಯದ ಮಾರುತಿ ಬಡಾವಣೆಯಲ್ಲಿ ಸ್ಥಾಪನೆಗೊಂಡಿರುವ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದ ಬಲಭಾಗದಲ್ಲಿಯೇ ಪ್ರತಿಷ್ಠಾಪನೆಗೊಂಡ ಧ್ಯಾನಮುದ್ರೆಯ ಶಿವನ ಬೃಹತ್ ವಿಗ್ರಹ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಬೆಂಗಳೂರಿನ ಉದ್ಯಮಿ ಆರ್. ಪ್ರಭಾಕರ್ ರೆಡ್ಡಿ ಕಂಡ ಮಹತ್ವಾಕಾಂಕ್ಷೀ ಕನಸಿನ ಸಾಕಾರ ರೂಪವೇ ಈ ಶಿವನ ಬೃಹತ್ ವಿಗ್ರಹ.

ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೆಂಫೋರ್ಟ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವನ ವಿಗ್ರಹವೇ ಬೆಂಗಳೂರಿನಲ್ಲಿರುವ ಅತಿ ದೊಡ್ಡ ವಿಗ್ರಹವಾಗಿದೆ. ಪ್ರಸ್ತುತ ಪ್ರತಿಷ್ಠಾಪನೆಯಾಗಿರುವ ಈ ವಿಗ್ರಹ ಬೆಂಗಳೂರು ಮಹಾನಗರದ ಎರಡನೇ ಅತಿದೊಡ್ಡ ಶಿವನ ವಿಗ್ರಹವಾಗಿ ರೂಪುಗೊಂಡಿದೆ. ಸಂಪೂರ್ಣ ಸಿಮೆಂಟ್ ಹಾಗೂ ಕಾಂಕ್ರೀಟ್ ಬಳಕೆಯಲ್ಲಿ ಈ ಬೃಹತ್ ವಿಗ್ರಹ ರೂಪುಗೊಂಡಿರುವುದು ಮತ್ತೊಂದು ವಿಶೇಷ.
ಮತ್ತಷ್ಟು
ಇನ್ನೂ ಮೂವರು ಉಗ್ರರು ಸಿಓಡಿ ಬಲೆಗೆ
ರಾಜ್ಯದಲ್ಲಿ ಬಾಲ್ಯವಿವಾಹ ಇನ್ನೂ ಜೀವಂತ
ಉಗ್ರರ ವಿಚಾರಣೆ ಸಿಬಿಐಗೊಪ್ಪಿಸಲು ಬಿಜೆಪಿ ಒತ್ತಾಯ
ಎಸ್.ಎಂ. ಕೃಷ್ಣ ಕೇಂದ್ರ ಸಂಪುಟಕ್ಕೆ?
ಒಂಭತ್ತು ಕೊಲೆ ಪಾತಕಿಗಳ ಸೆರೆ
ಜನಪ್ರಿಯವಾಗುತ್ತಿರುವ ರಾಜ್ಯಪಾಲರ ಜನತಾದರ್ಶನ