ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಘಾಟನೆಗೆ ಸಜ್ಜಾಗಿರುವ ಅಂಡರ್ ಪಾಸ್
ಬಿಬಿಎಂಪಿಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ನಗರದ ಪಟಾಪಾಟ್ ಅಂಡರ್ ಪಾಸ್ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ.

ಉದ್ಯಾನನಗರಿಯಲ್ಲಿ ಈ ರೀತಿಯ ಮೊದಲ ಯೋಜನೆ ಆಗಿರುವುದರಿಂದ ಉದ್ಘಾಟನೆಯನ್ನು ರಾಜ್ಯಪಾಲರು ಮಾಡಲಿದ್ದಾರೆ. ಆ ಬಳಿಕವಷ್ಟೆ ಸಂಚಾರಕ್ಕೆ ಮುಕ್ತವಾಗಿಸುವ ಬಗ್ಗೆ ಬಿಬಿಎಂಪಿ ನಿರ್ಧರಿಸಿದೆ. ಈ ಪ್ರಥಮ ಅಂಡರ್ ಪಾಸ್ ಸೋಮವಾರ ಅಥವಾ ಬುಧವಾರದಂದು ಉದ್ಘಾಟನೆಗೊಳ್ಳುವ ಸಾಧ್ಯತೆಗಳಿವೆ.

ಯೋಜನೆಯ ಪ್ರಕಾರ ಜನವರಿ 16ಕ್ಕೆ ಅಂಡರ್ ಪಾಸ್ ಕಾಮಗಾರಿ ಸಿದ್ಧವಾಗಬೇಕಿತ್ತು. ಆದರೆ ಪ್ರಾರಂಭದಲ್ಲಿಯೇ ಉಂಟಾದ ವಿಘ್ನಗಳಿಂದ 72 ಗಂಟೆಗಳಲ್ಲಿ ಆಗಬೇಕಾದ ಕಾಮಗಾರಿ 33 ದಿನಗಳ ಬಳಿಕ ಈಗ ಎದ್ದು ನಿಂತಿದೆ. ಆದರೆ ವಿಘ್ನಗಳು ಇನ್ನೂ ಅಂತ್ಯಗೊಳ್ಳದಿರುವುದು ಬಿಬಿಎಂಪಿಗೆ ಕಪ್ಪು ಚುಕ್ಕೆಯಾಗಿದೆ.

ಈ ಮಧ್ಯೆ ನಿಗದಿಯಾಗಿರುವ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದೆ ಇದ್ದುದರಿಂದ ಸುಮಾರು 40 ಲಕ್ಷರೂ. ಹೆಚ್ಚುವರಿಯಾಗಿ ಖರ್ಚು ಮಾಡಲಾಗಿದೆ. ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಈ 72ಗಂಟೆಗಳ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿತ್ತು. ಆದರೆ ಇದು 744 ಗಂಟೆಗಳಾದರೂ ಮುಗಿಯದಿದ್ದ ಕಾರಣ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು.

ಎಲ್ಲ ಕಂಟಕಗಳನ್ನು ದಾಟಿ ಸದ್ಯದ ಪರಿಸ್ಥಿತಿಯಲ್ಲಿ ಅದೀಗ ಉದ್ಘಾಟನೆಗೆ ಸಿದ್ಧವಾಗಿದೆ.
ಮತ್ತಷ್ಟು
ಬೆಂಗಳೂರಿನಲ್ಲಿ 26 ಅಡಿ ಎತ್ತರದ ಶಿವನ ವಿಗ್ರಹ
ಇನ್ನೂ ಮೂವರು ಉಗ್ರರು ಸಿಓಡಿ ಬಲೆಗೆ
ರಾಜ್ಯದಲ್ಲಿ ಬಾಲ್ಯವಿವಾಹ ಇನ್ನೂ ಜೀವಂತ
ಉಗ್ರರ ವಿಚಾರಣೆ ಸಿಬಿಐಗೊಪ್ಪಿಸಲು ಬಿಜೆಪಿ ಒತ್ತಾಯ
ಎಸ್.ಎಂ. ಕೃಷ್ಣ ಕೇಂದ್ರ ಸಂಪುಟಕ್ಕೆ?
ಒಂಭತ್ತು ಕೊಲೆ ಪಾತಕಿಗಳ ಸೆರೆ