ಹಾಸನ ನಗರಸಭೆಯ ಅಧ್ಯಕ್ಷಸ್ಥಾನದ ಚುನಾವಣೆ ಕುತೂಹಲದ ಘಟ್ಟವನ್ನು ಮುಟ್ಟಿದ್ದು ಅದು ಯಾರ ತೆಕ್ಕೆಗೆ ಬೀಳಲಿದೆ ಎಂಬುದು ಎಲ್ಲರ ಆಸಕ್ತಿ ಕೆರಳಿಸಿದೆ.
ಈಗಾಗಲೇ ಜೆಡಿಎಸ್ ವಶದಲ್ಲಿ 16 ಸ್ಥಾನಗಳು ಹಾಗೂ ಕಾಂಗ್ರೆಸ್ ವಶದಲ್ಲಿ 11 ಸ್ಥಾನಗಳಿವೆ. ಪಕ್ಷೇತರರು 4 ಮಂದಿಯಿದ್ದರೆ, ಬಿಜೆಪಿಯದು ಕೇವಲ 1 ಸ್ಥಾನ. ಈ ಪೈಕಿ ಪಕ್ಷೇತರರು ಹಾಗೂ ಬಿಜೆಪಿ ಸದಸ್ಯರು ಜೆಡಿಎಸ್‌ಗೆ ಬೆಂಬಲ ಸೂಚಿಸುವ ಸುದ್ದಿಗಳಿದ್ದು ಹಾಗಾದಲ್ಲಿ ಅಧ್ಯಕ್ಷಸ್ಥಾನ ಜೆಡಿಎಸ್ ಪಾಲಾಗಲಿದೆ.
ಪ್ರವಾಸದಲ್ಲಿದ್ದ ಜೆಡಿಎಸ್ ಸದಸ್ಯರೆಲ್ಲಾ ಈಗಾಗಲೇ ನಗರಕ್ಕೆ ವಾಪಾಸಾಗಿದ್ದು ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿರುವ ರತ್ನಮ್ಮ ಮಹಾಂತೇಶ್ ಅವರ ಆಯ್ಕೆ ಖಚಿತವಾದಂತಿದೆ. ಆದರೆ ಉಪಾಧ್ಯಕ್ಷರ ಸ್ಥಾನಕ್ಕೆ ಸಂಬಂಧಿಸಿ ಗೊಂದಲಗಳಿದ್ದು ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಏರ್ಪಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
|