ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷ್ಣಾಗಮನಕ್ಕೆ ಹಳ್ಳಿ ಹಕ್ಕಿ ಅಡ್ಡಿ?
NRB
ಕ್ಷೇತ್ರ ಪುನರ್ವಿಂಗಡಣೆಯ ಆದೇಶದ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಗಳು ನವೆಂಬರ್ ತನಕ ಮುಂದೂಡಲ್ಪಡುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣರ ಅವರು ರಾಜ್ಯ ರಾಜಕಾರಕ್ಕೆ ಆಗಮಿಸುವಲ್ಲಿ ಕೊಂಚ ವಿಳಂಬ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಕೃಷ್ಣರನ್ನು ರಾಜ್ಯಕ್ಕೆ ಕಳಿಸಲು ಹೈಕಮಾಂಡ್ ಒಪ್ಪಿದೆಯಾದರೂ ಕಾಲ ಅದಕ್ಕೆ ಪಕ್ವವಾಗಿಲ್ಲ ಎಂಬುದು ಅದರ ಭಾವನೆ. ಇತ್ತೀಚೆಗಷ್ಟೇ ಮಾಜಿ ಸಚಿವ ವಿಶ್ವನಾಥ್ ಬರೆದ ಹಳ್ಳಿ ಹಕ್ಕಿಯ ಹಾಡು ಕೃತಿಯ ವಿವಾದವು ಸಂಪೂರ್ಣವಾಗಿ ಜನರ ಮನಸ್ಸಿನಿಂದ ದೂರವಾದ ನಂತರ ಕೃಷ್ಣರನ್ನು ಕಳಿಸುವುದು ಸೂಕ್ತ ಎಂಬುದು ಹೈಕಮಾಂಡ್ ಅಭಿಪ್ರಾಯ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ವಿಶ್ವನಾಥ್ ಕೃತಿಯ ಬಗ್ಗೆ ಎಸ್.ಎಂ.ಕೃಷ್ಣರು ಇದುವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸದೆ ತಟಸ್ಥರಾಗಿಯೇ ಇದ್ದಾರೆ. ಡಿಪ್ಲೊಮ್ಯಾಟಿಕ್ ರಾಜಕಾರಣಿ ಎಂದೇ ಹೆಸರಾದ ಕೃಷ್ಣ ಈ ವಿವಾದವನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸುತ್ತಾರೆ. ಹೀಗಾಗಿ ಈ ಕ್ಷಣವೇ ಅವರನ್ನು ರಾಜ್ಯ ರಾಜಕಾರಣಕ್ಕೆ ಕಳಿಸುವುದು ಒಳ್ಳೆಯದು ಎಂಬುದು ಅವರ ಬೆಂಬಲಿಗರ ಅಭಿಪ್ರಾಯ.

ಚುನಾವಣೆ ನವೆಂಬರ್‌ನಲ್ಲಿ ನಡೆಯಲಿದೆಯಾದರೂ ಪಕ್ಷ ಸಂಘಟನೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಈಗಿನ ನಾಯಕತ್ವ ಒಂದು ವರ್ಗದ ಮತಗಳನ್ನು ತರಬಲ್ಲದೇ ವಿನಃ ಪಕ್ಷಕ್ಕೊಂದು ಚಾರ್ಮ್ ನೀಡಲಾರದು ಎಂಬ ಮಾತುಗಳು ಕೇಳಿಬರುತ್ತಿದೆಯಾದರೂ, ಹೈಕಮಾಂಡ್ ಬೇರೆಯದೇ ಆದ ಲೆಕ್ಕಾಚಾರ ಹಾಕಿರುವುದು ಕೃಷ್ಣ ಬೆಂಬಲಿಗರಲ್ಲಿ ಕೊಂಚ ಅಚ್ಚರಿ, ಕೊಂಚ ಬೇಸರ ಮೂಡಿಸಿದೆ.
ಮತ್ತಷ್ಟು
ಕುತೂಹಲ ಕೆರಳಿಸಿರುವ ಹಾಸನ ನಗರಸಭೆ
ಪ್ರಕಾಶ್ ಸದ್ಯವೇ ಅಧಿಕೃತವಾಗಿ ಕಾಂಗ್ರೆಸ್‌ಗೆ
ಬಿಜೆಪಿ ಸೇರಲು ಮುಖಂಡರಿಗೆ ಬಹಿರಂಗ ಆಹ್ವಾನ
ಉದ್ಘಾಟನೆಗೆ ಸಜ್ಜಾಗಿರುವ ಅಂಡರ್ ಪಾಸ್
ಬೆಂಗಳೂರಿನಲ್ಲಿ 26 ಅಡಿ ಎತ್ತರದ ಶಿವನ ವಿಗ್ರಹ
ಇನ್ನೂ ಮೂವರು ಉಗ್ರರು ಸಿಓಡಿ ಬಲೆಗೆ