ಕಾಂಗ್ರಸ್ ಹಾಗೂ ಜೆಡಿಎಸ್‌ಗಳು ತಲಾ 24 ಸ್ಥಾನಗಳನ್ನು ಪಡೆದಿರುವುದರಿಂದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಪಟ್ಟ ಯಾರಿಗೆ ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿಗೆ.
ತಮ್ಮನ್ನು ಬೆಂಬಲಿಗರ ಮತ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ 24 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ 20 ಸ್ಥಾನಗಳನ್ನು ಹೊಂದಿದೆ. ಪಕ್ಷೇತರ ಸದಸ್ಯೆಯಾಗಿರುವ ಪುಷ್ಪಲತಾ ಜಗನ್ನಾಥ್ ಅವರ ಮತ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಬಲ್ಲ ಮೂಲಗಳ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿಗೆ ಪುಷ್ಪಲತಾ ಮತ ಚಲಾಯಿಸುವ ನೀರೀಕ್ಷೆ ಇದೆ.
ಪ್ರಸ್ತುತ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳು ಕ್ರಮವಾಗಿ ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದು ಉಪಮೇಯರ್ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಕಮಲಮ್ಮ ಆಯ್ಕೆ ಖಚಿತವಾಗಿದೆ.
ಜೆಡಿಎಸ್ ಪರವಾಗಿ ಸಂದೇಶ್ ಸ್ವಾಮಿ, ಕಾಂಗ್ರೆಸ್ ಪರ ಅಯೂಬ್ ಖಾನ್ ಹಾಗೂ ಬಿಜೆಪಿ ವತಿಯಿಂದ ಮಾವಿ ರಾಮಪ್ರಸಾದ್ ಅಭ್ಯರ್ಥಿಗಳಾಗಿದ್ದು, ಕಾಂಗ್ರೆಸ್ನ ದೇವರಾಜ್ ತಮ್ಮ ನಾಮಪತ್ರವನ್ನು ವಾಪಾಸು ಪಡೆದಿದ್ದಾರೆ. ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸುವ ಹಂತದಲ್ಲಿರುವುದರಿಂದ ಅವರನ್ನು ಸೆಳೆಯಲು ಎಲ್ಲಾ ಬಗೆಯ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
|