ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಶೋಕ್ ವಿರುದ್ಧ ಅಕ್ರಮ ಭೂ ಹಂಚಿಕೆ ಆರೋಪ
ಮಾಜಿ ಸಚಿವ ಅಶೋಕ್ ಅವರು, ಬಡವರಿಗೆ ಹಂಚಬೇಕಿದ್ದ ನೂರಾರು ಎಕರೆ ಜಮೀನನ್ನು ಬಿಜೆಪಿ ಕಾರ್ಯಕರ್ತರು ಹಾಗೂ ತಮ್ಮ ಬೆಂಬಲಿಗರಿಗೆ ಅಕ್ರಮವಾಗಿ ವಿತರಿಸಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್ ಕಾರ್ಯಕರ್ತರು, ಸೋಮವಾರ ಇವರ ವಿರುದ್ಧ ಪ್ರತಿಭಟನಾ ಧರಣಿ ನಡೆಸಿದರು.

ಕಾಂಗ್ರೆಸ್ ಮುಖಂಡರಾದ ಸದಾನಂದ್, ಸಲೀಂ, ಮನೋಹರ್, ಮಾಜಿ ಮೇಯರ್ ಹುಚ್ಚಪ್ಪ ಹಾಗೂ ಇನ್ನಿತರ ನಾಯಕರು ಪಾಲ್ಗೊಂಡಿದ್ದ ಈ ಪ್ರತಿಭಟನಾ ಧರಣಿಯಲ್ಲಿ ಅಶೋಕ್ ವಿರುದ್ಧ ಅಕ್ರಮ ಭೂಮಿ ಹಂಚಿಕೆ ಆರೋಪ ಮಾಡಿದ್ದು, ತನಿಖೆಗೆ ಒತ್ತಾಯಿಸಲಾಯಿತು.

ಧರಣಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ಎಸ್.ಟಿ.ಸೋಮಶೇಖರ್ ಈ ಕುರಿತು ಮಾತನಾಡುತ್ತಾ, ಭೂ ನ್ಯಾಯ ಮಂಡಳಿಯ ಬಗರ್ ಹುಕುಂ ಸಾಗುವಳಿ ಸಕ್ರಮ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಜಿ ಸಚಿವ ಅಶೋಕ್‌ ಅವರು ಉತ್ತರಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳ ಕೋಟ್ಯಾಂತರ ರೂ. ಬೆಲೆಯ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂದು ಆಪಾದಿಸಿದರು.

ಇಷ್ಟೇ ಅಲ್ಲದೆ, ಮಾಜಿ ಸಂಸದ ಎಂ.ಶ್ರೀನಿವಾಸ್‌ ಕೆಂಗೇರಿ ಹೋಬಳಿಯಲ್ಲಿ ಬೇನಾಮಿ ಹೆಸರಿನಲ್ಲಿ ಅಕ್ರಮ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದೂ ಆಪಾದಿಸಿದ ಸೋಮಶೇಖರ್, ಕೂಡಲೇ ಈ ಅಕ್ರಮ ಮಂಜೂರಾತಿಗಳನ್ನು ರದ್ದುಪಡಿಸಿ ಆರೋಪಿಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಮತ್ತಷ್ಟು
ಅಂತಾರಾಜ್ಯ ಕಾರು ಕಳ್ಳರ ಬಂಧನ
ರಸ್ತೆ ಬದಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ: 3 ಸಾವು
ರಾಜ್ ಠಾಕ್ರೆ ಹಾದಿಯಲ್ಲಿ ಚಂಪಾ?
ಮೈಸೂರು ಮೇಯರ್ ಪಟ್ಟ ಯಾರಿಗೆ?
ಕೃಷ್ಣಾಗಮನಕ್ಕೆ ಹಳ್ಳಿ ಹಕ್ಕಿ ಅಡ್ಡಿ?
ಕುತೂಹಲ ಕೆರಳಿಸಿರುವ ಹಾಸನ ನಗರಸಭೆ