ಪಬ್‌ಗಳಲ್ಲಿ ಕುಳಿತು ಎಣ್ಣೆ ಹೊಡೆಯುವ ಕುಡುಕರು ಇನ್ನು ತಮ್ಮ ಪಾನಸೇವನೆಯನ್ನು ಅವಸರವಸರದಿಂದ ಮುಗಿಸಬೇಕಿಲ್ಲ. ಈ ವರ್ಗಕ್ಕೆ ಖುಷಿಕೊಡುವ ಸುದ್ದಿ ಇದೆ. ಇನ್ನು ಪಬ್‌ಗಳಲ್ಲಿ ಬೆಳಗಿನ ಜಾವ ಒಂದು ಗಂಟೆಯವರೆಗೆ ಹಾಯಾಗಿ ಗುಂಡು ಹಾಕುತ್ತಾ ಕೂರಬಹುದು.
ವಿಷಯ ಏನಪಾ ಅಂದ್ರೆ, ಪಬ್ ಮುಚ್ಚುವ ಸಮಯವನ್ನು ರಾತ್ರಿ 11.30ರ ಬದಲಾಗಿ 1ರ ತನಕ ವಿಸ್ತರಿಸುವ ಕುರಿತು ಗೃಹ ಇಲಾಖೆ ಅಂತಿಮ ನಿರ್ಧಾರವನ್ನು ಅಬಕಾರಿ ಇಲಾಖೆಗೆ ಬಿಟ್ಟುಕೊಟ್ಟಿದೆ. ಈ ಮೂಲಕ ಅಬಕಾರಿ ಇಲಾಖೆಯು ಈ ಬಗ್ಗೆ ಚಿಂತನೆ ನಡೆಸಿದ್ದು, ಶೀಘ್ರದಲ್ಲಿ ಚಾಲನೆಗೆ ಬರಲಿದೆ ಎಂದು ಮೂಲಗಳು ಹೇಳಿವೆ.
ನಗರದಲ್ಲಿ ಬಂದು ಹೋಗುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಸಮಯವನ್ನು ವಿಸ್ತರಿಸಬೇಕೆಂದು ಪ್ರವಾಸೋದ್ಯಮ ಇಲಾಖೆ ಸರಕಾರಕ್ಕೆ ಈ ಹಿಂದೆಯೇ ಮನವಿ ಸಲ್ಲಿಸಿತ್ತು. ಆದರೆ ಪೊಲೀಸ್ ಇಲಾಖೆ, ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಹುದು ಹಾಗೂ ಸಿಬ್ಬಂದಿಯ ಕೊರತೆ ಎದುರಿಸುತ್ತಿದೆ ಎಂದು ಈ ಪ್ರಸ್ತಾಪವನ್ನು ವಿರೋಧಿಸಿತ್ತು.
ಈಗ ಗೃಹ ಇಲಾಖೆ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಒಪ್ಪಿಗೆ ಸೂಚಿಸಿದೆ. ಅಂತೆಯೇ ಪೊಲೀಸ್ ಇಲಾಖೆ ಜಾರಿಗೆ ತರುವ ಮೊದಲು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಬೇಕಾಗಿರುವುದರಿಂದ ಹೆಚ್ಚಿನ ಸಿಬ್ಬಂದಿ ಒದಗಿಸಬೇಕೆಂಬ ಬೇಡಿಕೆ ಮುಂದಿಟ್ಟಿದೆ.
|