ಗುಲ್ಬರ್ಗಾ ನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪಾಲಾಗಿದೆ. ಮಂಗಳವಾರ ನಡೆದ ಚುನಾವಣೆಯಲ್ಲಿ ತೀವ್ರ ಪೈಪೋಟಿ ಮೂಡಿತ್ತು. ಆದರೆ ಕೊನೆಯ ಹಂತದಲ್ಲಿ ಹೊರಬಂದ ಫಲಿತಾಂಶ ಅಚ್ಚರಿ ಮೂಡಿಸಿತು.
ಮೆಯರ್ ಆಗಿ ಕಾಂಗ್ರೆಸ್‌ನ ರವೀಂದ್ರನಾಥ್ ಹೊನ್ನಾಳಿ ಆಯ್ಕೆಯಾದರೆ, ಜೆಡಿಎಸ್‌ನ ಶಬಾನಾ ಉಪಮೇಯರ್ ಸ್ಥಾನವನ್ನು ಪಡೆದುಕೊಂಡರು. ಈ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಗರ ಪಾಲಿಕೆ ಸ್ಥಾನವನ್ನು ಹಂಚಿಕೊಂಡಿದೆ.
ಈ ಚುನಾವಣೆಯಲ್ಲಿ ಕೇವಲ ಕೆಲವೇ ಮತಗಳ ಅಂತರಗಳಿಂದ ರವೀಂದ್ರನಾಥ್ ಮೇಯರ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
|