ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರ ಚುನಾವಣೆ ಆಗ್ರಹ ಸಲ್ಲ: ಹನುಮಂತಪ್ಪ
ಕ್ಷೇತ್ರ ಪುನರ್ ವಿಂಗಡಣೆಯಂತೆ ಚುನಾವಣೆ ನಡೆಸುವುದು ಸೂಕ್ತ ಎಂದು ಹೇಳಿರುವ ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಕಾರ್ಮಿಕ ಕಲ್ಯಾಣ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಎನ್. ಹನುಮಂತಪ್ಪ, ಇದರಿಂದಾಗಿ ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಲಭಿಸಬಹುದಾಗಿದೆ ಎಂದು ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕ್ಷೇತ್ರ ಪುನರ್ವಿಂಗಡಣೆಯಿಂದ ಹಲವು ಅರ್ಹ ದಲಿತರು ರಾಜಕಾರಣಕ್ಕೆ ಪ್ರವೇಶಿಸಲು ಹೆಚ್ಚು ಅನುಕೂವಾಗುತ್ತದೆ. ಈ ನಿರ್ಧಾರವನ್ನು ಕೆಲವು ರಾಜಕೀಯ ಪಕ್ಷಗಳು ಸ್ವಾಗತಿಸಿದ್ದರೂ, ಶೀಘ್ರ ಚುನಾವಣೆ ನಡೆಸಬೇಕೆಂಬ ಆಗ್ರಹವನ್ನು ದಲಿತ ಸಂಘ ವಿರೋಧಿಸುತ್ತದೆ ಎಂದು ತಿಳಿಸಿದರು.

ಶೀಘ್ರ ಚುನಾವಣೆಗಾಗಿ ಬಿಜೆಪಿ ಪಕ್ಷವು ನಡೆಸಬೇಕೆಂದಿರುವ ರಾಲಿ ಹಾಗೂ ಪ್ರತಿಭಟನೆಯ ಬೆದರಿಕೆಯನ್ನು ಅವರು ಖಂಡಿಸಿದರು.

ರೈಲ್ವೆ ಇಲಾಖೆಯಲ್ಲಿ ಸ್ಥಳಿಯರಿಗೆ ಶೇ. 80ರಷ್ಟು ಮೀಸಲಾತಿಯನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿ ರೈಲ್ವೆ ಬಜೆಟ್ ಮಂಡನೆಗೆ ಮುನ್ನ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹನುಮಂತಪ್ಪ ಈ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಮುಷ್ಕರಕ್ಕೆ ಮ್ಯಾಕ್ಸಿಕ್ಯಾಬ್ ಮಾಲೀಕರ ಬೆಂಬಲ
ಕೆಡಿಎಫ್ ನಿಷೇಧಕ್ಕೆ ಡಿವಿಎಸ್ ಒತ್ತಾಯ
ರೈಲ್ವೆ ಬಜೆಟ್: ರಾಜ್ಯಕ್ಕೆ ಆದ್ಯತೆಗೆ ಒತ್ತಾಯ
ಗುಲ್ಬರ್ಗ ಪಾಲಿಕೆ ಅಚ್ಚರಿಯ ಫಲಿತಾಂಶ
ಗುಂಡುಪ್ರಿಯರಿಗೆ ಸಂತಸದ ಸುದ್ದಿ
ಬೆಂಬಲ ಬೆಲೆ: ಕಬ್ಬು ಬೆಳೆಗಾರರ ಅಸಮಾಧಾನ, ಚಳುವಳಿ