ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತುಮಕೂರು ಆಸ್ಪತ್ರೆಯಲ್ಲಿ ನವಜಾತ ಶಿಶು ಕಣ್ಮರೆ
ತುಮಕೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಕಣ್ಮರೆಯಾಗಿರುವ ಸಿನಿಮೀಯ ಘಟನೆ ಸಂಭವಿಸಿದೆ.

ತುಮಕೂರು ಸಮೀಪದ ಹಳ್ಳಿಯೊಂದರ ಹೆಣ್ಣುಮಗಳು ನಿನ್ನೆಯಷ್ಟೇ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದಳು. ಬಾಣಂತಿಯನ್ನು ನೋಡಿಕೊಳ್ಳಲು ಆಕೆಯ ಬಂಧುಗಳೂ ಸನಿಹದಲ್ಲೇ ಇದ್ದರೂ ಸಹ ಮಗು ಕಣ್ಮರೆಯಾಗಿರುವುದಕ್ಕೆ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬಾಣಂತಿಯ ಸಂಬಂಧಿಗಳು ಹೇಳುವ ಪ್ರಕಾರ, ತಾನೂ ಸಹ ಈ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಮಹಿಳೆಯೊಬ್ಬಾಕೆ ಇವರಿದ್ದ ವಾರ್ಡ್‌ಗೆ ಬರುತ್ತಿದ್ದು ಇವರ ವಿಶ್ವಾಸ ಗಳಿಸಿ ಮಗುವನ್ನು ಎತ್ತಿಕೊಳ್ಳುತ್ತಿದ್ದಳು. ಅವಳೇ ಈ ಮಗುವನ್ನು ಅಪಹರಿಸಿದ್ದಾಳೆ ಎಂಬುದಾಗಿ ಅವರು ಸಂಶಯಿಸಿದ್ದಾರೆ.

ಆದರೆ ಇಷ್ಟೆಲ್ಲಾ ಆದರೂ ಆಸ್ಪತ್ರೆಯ ಸಿಬ್ಬಂದಿ-ಶುಶ್ರೂಷಕಿಯರು ಯಾವುದೇ ಎಚ್ಚರ ವಹಿಸಿಲ್ಲ ಎ0ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಭದ್ರತೆ ಇಲ್ಲದ ಕಾರಣ ಯೂರು ಬೇಕಾದರೂ ಆಸ್ಪತ್ರೆಗೆ ನುಗ್ಗ ಬಹುದಾಗಿದೆ ಎಂದು ಅವರು ದೂರಿದ್ದಾರೆ.

ಮಗುವನ್ನು ಕಳೆದುಕೊಂಡಿರುವ ತಾಯಿ ತನ್ನ ಮಗುವನ್ನು ಹೇಗಾದರೂ ಮರಳಿ ತಂದುಕೊಡಿ ಎಂದು ರೊಧಿಸುತ್ತಿದ್ದಾಳೆ.
ಮತ್ತಷ್ಟು
ಶೀಘ್ರ ಚುನಾವಣೆ ಆಗ್ರಹ ಸಲ್ಲ: ಹನುಮಂತಪ್ಪ
ಮುಷ್ಕರಕ್ಕೆ ಮ್ಯಾಕ್ಸಿಕ್ಯಾಬ್ ಮಾಲೀಕರ ಬೆಂಬಲ
ಕೆಡಿಎಫ್ ನಿಷೇಧಕ್ಕೆ ಡಿವಿಎಸ್ ಒತ್ತಾಯ
ರೈಲ್ವೆ ಬಜೆಟ್: ರಾಜ್ಯಕ್ಕೆ ಆದ್ಯತೆಗೆ ಒತ್ತಾಯ
ಗುಲ್ಬರ್ಗ ಪಾಲಿಕೆ ಅಚ್ಚರಿಯ ಫಲಿತಾಂಶ
ಗುಂಡುಪ್ರಿಯರಿಗೆ ಸಂತಸದ ಸುದ್ದಿ