ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಟಿಎಂ ಯಂತ್ರ ಉದುರಿಸಿದ ನಕಲಿ ನೋಟು
ಇಲ್ಲಿನ ರಾಷ್ಟ್ರೀಕೃತ ಬ್ಯಾಂಕೊಂದರ ಎಟಿಎಂ ಕೇಂದ್ರವೊಂದರಲ್ಲಿ ಹಣವನ್ನು ಪಡೆದ ಗ್ರಾಹಕರೊಬ್ಬರಿಗೆ 500 ರೂಪಾಯಿಯ ನಕಲಿ ನೋಟೊಂದು ಸಿಕ್ಕಿದ್ದು, ಬ್ಯಾಂಕಿನ ಮ್ಯಾನೇಜರ್ ಈ ಕುರಿತು ದೂರು ನೀಡಿದಾಗ ಅವರ ಉಡಾಫೆಯಿಂದ ವರ್ತಿಸಿದರೆನ್ನಲಾಗಿದೆ.

ಗ್ರಾಹಕರೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ 25 ಸಾವಿರ ರೂಪಾಯಿಯನ್ನ ಎಟಿಎಂ ಕಾರ್ಡ್ ಬಳಸಿ ತೆಗೆದಿದ್ದರು. ಅದರಲ್ಲಿ ಒಂದು ಮೊತ್ತವನ್ನು ತಮ್ಮ ಸ್ನೇಹಿತನಿಗೆಂದು ಕೊಡಲು ಮುಂದಾಗಿ, ಪರೀಕ್ಷಿಸುವಾಗ ಅದರಲ್ಲೊಂದು ಖೋಟಾನೋಟು ಇದ್ದುದು ಅವರ ಅರಿವಿಗೆ ಬಂತು. ಅಸಲಿ ನೋಟಿನಲ್ಲಿರಬೇಕಾದ ಸಂಖ್ಯೆಯ ಸ್ವರೂಪ ಹಾಗೂ ಇನ್ನಿತರ ನಮೂದುಗಳಲ್ಲಿ ವ್ಯತ್ಯಯ ಕಂಡುಬಂದಿದ್ದರಿಂದ ಅದು ಖೋಟಾನೋಟೆಂದು ಅವರು ಪತ್ತೆಹಚ್ಚಿದ್ದರು.

ಆದರೆ ಈ ಕುರಿತು ಬ್ಯಾಂಕ್ ಮ್ಯಾನೇಜರ್‌ಗೆ ಮಾಹಿತಿ ನೀಡಿ ಈ ಕುರಿತು ವಿವರಣೆ ಕೇಳಿದಾಗ ಹಾಗೂ ಕ್ರಮ ಕೈಗೊಳ್ಳಲು ಅವರನ್ನು ಕೇಳಿಕೊಂಡಾಗ ಅವರಿಗೆ ಸಮಜಾಯಿಷಿ ಅಥವಾ ತಪ್ಪನ್ನು ಸರಿಪಡಿಸುವ ಉತ್ತರದ ಬದಲಾಗಿ ಉಡಾಫೆಯ ಉತ್ತರಗಳು ದೊರೆತವು ಎಂದು ದೂರಲಾಗಿದೆ.

ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸುವ ಜವಾಬ್ದಾರಿಯನ್ನು ಬೇರೆ ಸಂಸ್ಥೆಯೊಂದಕ್ಕೆ ವಹಿಸಿರುವುದರಿಂದ ಈ ಕುರಿತು ನಂತರ ವಿವರಣೆ ನೀಡುವುದಾಗಿ ಮ್ಯಾನೇಜರ್ ತಿಳಿಸಿದ್ದಕ್ಕೆ ಅಸಮಾಧಾನಗೊಂಡ ಸದರಿ ಗ್ರಾಹಕರು ಈಗ ಸಂಬಂಧಿತ ಪ್ರಾಧಿಕಾರಕ್ಕೆ ದೂರು ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ.
ಮತ್ತಷ್ಟು
ತುಮಕೂರು ಆಸ್ಪತ್ರೆಯಲ್ಲಿ ನವಜಾತ ಶಿಶು ಕಣ್ಮರೆ
ಶೀಘ್ರ ಚುನಾವಣೆ ಆಗ್ರಹ ಸಲ್ಲ: ಹನುಮಂತಪ್ಪ
ಮುಷ್ಕರಕ್ಕೆ ಮ್ಯಾಕ್ಸಿಕ್ಯಾಬ್ ಮಾಲೀಕರ ಬೆಂಬಲ
ಕೆಡಿಎಫ್ ನಿಷೇಧಕ್ಕೆ ಡಿವಿಎಸ್ ಒತ್ತಾಯ
ರೈಲ್ವೆ ಬಜೆಟ್: ರಾಜ್ಯಕ್ಕೆ ಆದ್ಯತೆಗೆ ಒತ್ತಾಯ
ಗುಲ್ಬರ್ಗ ಪಾಲಿಕೆ ಅಚ್ಚರಿಯ ಫಲಿತಾಂಶ