ಪರೀಕ್ಷೆ ಬರೆಯಲು ತನಗೆ ಪ್ರವೇಶ ಪತ್ರ ಲಭಿಸಲಿಲ್ಲ ಎಂದು ನೊಂದ ವಿದ್ಯಾರ್ಥಿಯೊಬ್ಬಳು ಕಾಲೇಜು ಕ್ಯಾಂಪಸ್ಸಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರ ಕಾಲೇಜೊಂದರಲ್ಲಿ ಸಂಭವಿಸಿದೆ.
ನಗರದ ರಿಚ್ಮಂಡ್ ರಸ್ತೆಯಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಪಿಯುಸಿ ತರಗತಿಯಲ್ಲಿ ಓದುತ್ತಿದ್ದ ಸೋಫಿಯಾ ಎಂಬ ಹೆಸರಿನ ಈಕೆಗೆ ತರಗತಿಯ ಹಾಜರಾತಿ ಪ್ರಮಾಣ ಕಡಿಮೆ ಇದೆ ಎಂಬ ಕಾರಣಕ್ಕೆ ಪರೀಕ್ಷಾ ಪ್ರವೇಶ ಪತ್ರ ನಿರಾಕರಿಸಲಾಗಿದ್ದು ಇದರಿಂದ ನೊಂದ ಆಕೆ ಕಾಲೇಜು ಕ್ಯಾಂಪಸ್‌ನಲ್ಲಿಯೇ ಇಲಿ ಪಾಷಾಣ ಸೇವಿಸಿದಳು ಎಂದು ತಿಳಿದುಬಂದಿದೆ.
ಸೋಫಿಯಾಳ ಮನೆಯವರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಆಕೆಯೀಗ ನೀತಾ ಭತೀಜಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
|