ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಿಳೆಯ ಕೊಲೆಗೈದು ಆಭರಣ ಸಹಿತ ಪರಾರಿ
ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯೊಬ್ಹರ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿ, ಚಿನ್ನಾಭರಣ, ನಗದು ದೋಚಿ ಪರಾರಿಯಾದ ಘಟನೆ ಬೆಂಗಳೂರು ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಸಂಭವಿಸಿದ್ದು, ಜನತೆಯ ಆತಂಕ ಹೆಚ್ಚಿದೆ.

ಕುರುಬರಹಳ್ಳಿ ಜೆ.ಸಿ.ನಗರದಲ್ಲಿನ ಭಾರತ್ ಗ್ಯಾಸ್ ಗೋಡೌನ್ ಮುಂಭಾಗದಲ್ಲಿ ವಾಸವಾಗಿದ್ದ ಸುಬ್ರಮಣಿ ಎಂಬುವವರ ಪತ್ನಿ ಗೀತಾ(32) ಎಂಬವವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ.

ಮನೆಯಲ್ಲಿ ಒಬ್ಬರೇ ಇರುವುದನ್ನು ಅರಿತು ಒಳನುಗ್ಗಿದ ದುಷ್ಕರ್ಮಿಗಳು ಎಲೆಕ್ಟ್ರಿಕ್ ವಯರಿನಿಂದ ಕುತ್ತಿಗೆ ಬಿಗಿದು, ದಿಂಬಿನಿಂದ ಒತ್ತಿ ಕೊಲೆ ಮಾಡಿದ್ದಾರೆ. ಬಳಿಕ ಮಾಂಗಲ್ಯ ಸರ, ಚಿನ್ನದ ಸರ, ಎರಡು ಕೈ ಬಳೆ ಹಾಗೂ ಸುಮಾರು 9 ಸಾವಿರ ರೂ. ನಗದು ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಇಂತಹ ಕೊಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಖ್ಯವಾಗಿ ಒಂಟಿ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ನಗ ನಾಣ್ಯ ದೋಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮತ್ತಷ್ಟು
ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಚಾಲನೆ
ನಾಳೆ ಉಗ್ರರಿಗೆ ಮಂಪರು ಪರೀಕ್ಷೆ
ಹೊಸಬರಿಗೆ ಆದ್ಯತೆ: ಮಲ್ಲಿಕಾರ್ಜುನ ಖರ್ಗೆ
ಕಾಲೇಜಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ಸಾರ್ವಜನಿಕರಿಗೆ ಮುಕ್ತವಾದ ಅಂಡರ್‌ಪಾಸ್
ಎಟಿಎಂ ಯಂತ್ರ ಉದುರಿಸಿದ ನಕಲಿ ನೋಟು