ಎಚ್.ಪಿ. ಸಂಸ್ಥೆಯಲ್ಲಿ ಉದ್ಯೋಗಿ ಪ್ರತಿಭಾ ಕೊಲೆಯ ಸಂದರ್ಭದಲ್ಲಿ ಎಚ್.ಪಿ. ಮುಖ್ಯಸ್ಥರಾಗಿದ್ದ ಸೋಮ ಮಿತ್ತಲ್ ಅವರನ್ನು ಪ್ರಕರಣರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲು ಸುಪ್ರಿಂಕೋರ್ಟ್ ಒಪ್ಪಿಗೆ ನೀಡಿದೆ. ಈ ಮೂಲಕ ಕೊಲೆ ಪ್ರಕರಣಕ್ಕೆ ಹೊಸ ತಿರುವು ದೊರೆತಂತಾಗಿದೆ.
ಉದ್ಯೋಗಿಗಳಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ಕಾರಣ ಮಿತ್ತಲ್ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಪ್ರಸ್ತುತ ಸೋಮಮಿತ್ತಲ್ ನಾಸ್ಕಾಂ ಅಧ್ಯಕ್ಷರಾಗಿ ಮುಂಬೈನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಎರಡು ವರ್ಷಗಳ ಹಿಂದೆ ನಿಗೂಡ ರೀತಿಯಲ್ಲಿ ಪ್ರತಿಭಾ ಕೊಲೆಯಾಗಿದ್ದರು. ಆ ಸಂದರ್ಭದಲ್ಲಿ ಶಿವಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದರೂ, ಸೂಕ್ತ ಸಾಕ್ಷಾಧಾರಗಳು ಸಿಕ್ಕಿರಲಿಲ್ಲ ಹಾಗೂ ಪ್ರತಿಭಾ ಕುಟುಂಬದವರಿಗೆ ಯಾರ ಮೇಲೂ ಸಂಶಯವಿರದ ಕಾರಣ ಪ್ರಕರಣದ ಜಾಡು ಹಿಡಿಯುವಲ್ಲಿ ಪೊಲೀಸರು ವಿಫಲವಾಗಿದ್ದರು.
ಸೋಮ ಮಿತ್ತಲ್ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ಆದೇಶವನ್ನು ನೀಡಿದೆ.
|