ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಲ್ಬರ್ಗಾ: ಗಾಳಿಯಲ್ಲಿ ಗುಂಡು, ಲಾಠಿಚಾರ್ಜ್
ಕೊಂಕನಹಳ್ಳಿಯಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯರ ಮನವೊಲಿಕೆಗಾಗಿ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಉಂಟಾದ ಗೊಂದಲವು ತೀವ್ರ ಸ್ವರೂಪವನ್ನು ಪಡೆದಿದ್ದು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಲಾಠಿಚಾರ್ಜ್ ಮಾಡಿದ ಪರಿಣಾಮ ಹಲವರಿಗೆ ಗಾಯಗಳಾಗಿದ ಘಟನೆ ಸೇಡಂ ಬಳಿ ನಡೆದಿದೆ.

ಸಭೆಯ ಸಂದರ್ಭದಲ್ಲಿ ನಡೆದ ಗದ್ದಲ ವಿಕೋಪಕ್ಕೆ ತಿರುಗಿತು. ಇದನ್ನು ನಿಯಂತ್ರಿಸಲು ಅಸಾಧ್ಯವಾದಾಗ ಪೊಲೀಸರು ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಪರಿಸ್ಥಿತಿ ಹತೋಟಿಗೆ ಬರದಿದ್ದಾಗ ಲಾಠಿ ಚಾರ್ಜ್ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಹಲವು ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮತ್ತಷ್ಟು
ಬಂಟ್ವಾಳ: ರಿಕ್ಷಾ ಚಾಲಕನ ಭೀಕರ ಕೊಲೆ
ಪ್ರತಿಭಾ ಕೊಲೆ: ಮಿತ್ತಲ್ ವಿಚಾರಣೆಗೆ ಸು.ಕೋ ಒಪ್ಪಿಗೆ
ವಿಶ್ವನಾಥ್ ನಿಂದನೆ ಪ್ರಕರಣಕ್ಕೆ ಹೈ.ಕೋ. ತಡೆ
ಪಬ್ ಅವಧಿ ವಿಸ್ತರಣೆಗೆ ವ್ಯಾಪಕ ವಿರೋಧ
ಮಹಿಳೆಯ ಕೊಲೆಗೈದು ಆಭರಣ ಸಹಿತ ಪರಾರಿ
ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಚಾಲನೆ