ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರ ಚುನಾವಣೆಗೆ ವಾಟಾಳ್ ಒತ್ತಾಯ
NRB
"ರಾಷ್ಟ್ರಪತಿ ಆಳ್ವಿಕೆಯಿಂದ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ. ಹಾಗಾಗಿ ರಾಜ್ಯದಲ್ಲಿ ಶೀಘ್ರವೇ ಚುನಾವಣೆ ನಡೆಸಬೇಕು" ಎಂದು ಒತ್ತಾಯಿಸಿ ವಾಟಾಳ್ ಪಕ್ಷದ ನಾಯಕ ಹಾಗೂ ಮಾಜಿ ಶಾಸಕ ವಾಟಾಳ್ ನಾಗಾರಾಜ್ ಗುರುವಾರ ಪ್ರತಿಭಟನೆ ನಡೆಸಿದರು.

ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳ್ಳುವ ಮೇ ಒಳಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ ಅವರು, ತಮಟೆ ಬಾರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

"ರಾಜ್ಯಪಾಲರು ರಾಜಭವನ ಬಿಟ್ಟು ರಾಜ್ಯವನ್ನು ನಡೆಸಲು ಮುಂದಾಗಿದ್ದಾರೆ ಎಂದರೆ ಇದೊಂದು ಸರ್ವಾಧಿಕಾರಿ ಆಡಳಿತ ಎಂದೇ ಹೇಳಬೇಕಾಗುತ್ತದೆ. ಇದರಿಂದ ರಾಜ್ಯದ ಏಳಿಗೆಗೆ ಮಾರಕವಾಗಿದೆ. ಈ ಕೂಡಲೇ ಕೇಂದ್ರ ಸೂಕ್ತ ಕ್ರಮ ಕೈಗೊಂಡು ಚುನಾವಣೆಗೆ ಮುಂದಾಗಬೇಕು" ಎಂದು ಅವರು ಆಗ್ರಹಿಸಿದರು.

ತಮ್ಮ ನೂರಾರು ಕಾರ್ಯಕರ್ತರೊಂದಿಗೆ ಪ್ರತಿಭಟನೆಗೆ ಇಳಿದ ವಾಟಾಳ್, ಶೀಘ್ರ ಚುನಾವಣೆ ನಡೆಸದಿದ್ದರೆ ತೀವ್ರ ರೀತಿಯಲ್ಲಿ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.
ಮತ್ತಷ್ಟು
ಗುಲ್ಬರ್ಗಾ: ಗಾಳಿಯಲ್ಲಿ ಗುಂಡು, ಲಾಠಿಚಾರ್ಜ್
ಬಂಟ್ವಾಳ: ರಿಕ್ಷಾ ಚಾಲಕನ ಭೀಕರ ಕೊಲೆ
ಪ್ರತಿಭಾ ಕೊಲೆ: ಮಿತ್ತಲ್ ವಿಚಾರಣೆಗೆ ಸು.ಕೋ ಒಪ್ಪಿಗೆ
ವಿಶ್ವನಾಥ್ ನಿಂದನೆ ಪ್ರಕರಣಕ್ಕೆ ಹೈ.ಕೋ. ತಡೆ
ಪಬ್ ಅವಧಿ ವಿಸ್ತರಣೆಗೆ ವ್ಯಾಪಕ ವಿರೋಧ
ಮಹಿಳೆಯ ಕೊಲೆಗೈದು ಆಭರಣ ಸಹಿತ ಪರಾರಿ